ವಿವಾಹವಾಗುವುದಾಗಿ ನಂಬಿಸಿ ಸೆಕ್ಸ್‌ನಲ್ಲಿ ಪಾಲ್ಗೊಂಡಲ್ಲಿ ರೇಪ್ ಎಂದು ಪರಿಗಣಿಸಲಾಗದು: ಆಯೋಗ

ಶುಕ್ರವಾರ, 27 ಫೆಬ್ರವರಿ 2015 (16:34 IST)
ಮದುವೆಯಾಗುವುದಾಗಿ ನಂಬಿಸಿ ಸಮ್ಮತಿಯ ಸೆಕ್ಸ್‌ನಲ್ಲಿ ಪಾಲ್ಗೊಂಡಲ್ಲಿ ಅದನ್ನು ಅತ್ಯಾಚಾರವೆಂದು ಪರಿಗಣಿಸಲಾಗದು.ಅದನ್ನು ವಂಚನೆ ಎಂದು ಪರಿಗಣಿಸಬಹುದು ಎಂದು ಕೇರಳ ಮಹಿಳಾ ಆಯೋಗ ಅಭಿಪ್ರಾಯಪಟ್ಟಿದೆ. 
 
ಮೆಗಾ ಆದಾಲತ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಆಯೋಗದ ಸದಸ್ಯೆ ನೂರ್ಬಿನಾ ರಷೀದ್ ಮಾತನಾಡಿ, ಕೆಲ ವ್ಯಕ್ತಿಗಳು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಕೆಲ ಪ್ರಕರಣಗಳು ಆಯೋಗಕ್ಕೆ ಬಂದಿವೆ ಎಂದರು. 
 
ಇಂತಹ ಪ್ರಕರಣಗಳಲ್ಲಿ, ಒಂದು ವೇಳೆ ವಿವಾಹವಾಗುವುದಾಗಿ ನಂಬಿಸಿ ಸಮ್ಮತಿ ಸೆಕ್ಸ್‌ನಲ್ಲಿ ಪಾಲ್ಗೊಂಡಲ್ಲಿ ಅದನ್ನು ರೇಪ್ ಎಂದು ಗುರುತಿಸುವುದಿಲ್ಲ. ಕೇವಲ ವಂಚನೆ ಪ್ರಕರಣ ಮಾತ್ರ ಎಂದು ಪರಿಗಣಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 
 
ಕೇರಳ ಆಯೋಗಕ್ಕೆ 64 ದೂರುಗಳು ಬಂದಿದ್ದು ಅದರಲ್ಲಿ 34 ದೂರುಗಳನ್ನು ಪರಿಹರಿಸಲಾಗಿದೆ. ಇತರ 20 ದೂರುಗಳ ಪರಿಶೀಲನೆಯನ್ನು ನಿಗದಿಪಡಿಸಲಾಗಿದೆ. ಬಹುತೇಕ ಪ್ರಕರಣಗಳು ಗೃಹ ಕಲಹ ಮತ್ತು ಆಸ್ತಿ ಕಲಹಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಕೇರಳ ಮಹಿಳಾ ಆಯೋಗ ತಿಳಿಸಿದೆ.   
 

ವೆಬ್ದುನಿಯಾವನ್ನು ಓದಿ