2017ರಲ್ಲಿ ರಾಮ ಮಂದಿರ ನಿರ್ಮಾಣ ಆರಂಭ ಸಾಧ್ಯತೆ: ಯೋಗಿ ಆದಿತ್ಯನಾಥ್

ಶನಿವಾರ, 20 ಫೆಬ್ರವರಿ 2016 (16:03 IST)
2017ರಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
 
ರಾಯ್ಪುರಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದ ಅವರು ಮಸೀದಿ ನಿರ್ಮಾಣಕ್ಕೂ ಮುನ್ನ ಆ ಸ್ಥಳದಲ್ಲಿ ದೇವಸ್ತಾನವಿತ್ತು ಎಂದು ಎಎಸ್ಐ ತನ್ನ ವರದಿಯಲ್ಲಿ ಹೇಳಿತ್ತು. ಜತೆಗೆ ವಿವಾದಾತ್ಮಕ ಕಟ್ಟಡವನ್ನು ಒಡೆದು ಹಾಕಿದಾಗ ಮಂದಿರವಿದ್ದ ಬಗೆಗೆ  ಸಾಕಷ್ಟು ಸಾಕ್ಷ್ಯಗಳು ಸಿಕ್ಕಿದ್ದವು ಎಂದು ಆದಿತ್ಯನಾಥ್ ಪ್ರತಿಪಾದಿಸಿದ್ದಾರೆ. 
 
ಮುಂದಿನ ವರ್ಷ ರಾಮಂ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿರುವ ಅವರು ವಿವಾದಾತ್ಮಕ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಬಾಲರಾಮನ ಕೋಟ್ಯಾಂತರ ಅನುಯಾಯಿಗಳ ನಂಬಿಕೆಗೆ ಸಿಕ್ಕ ಜಯವಾಗಲಿದೆ ಎಂದು ಹೇಳಿದ್ದಾರೆ.
 
ಅಷ್ಟೇ ಅಲ್ಲದೆ ರಾಮ ಮಂದಿರ ನಿರ್ಮಾಣದಿಂದ ಬಹುಸಂಖ್ಯಾತ ಸಾರ್ವಜನಿಕ ಅಭಿಪ್ರಾಯ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ಕೊಟ್ಟಂತಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ