ಮದುವೆ ಉದ್ದೇಶಕ್ಕೆ ಇಸ್ಲಾಂಗೆ ಮತಾಂತರ ಸಮ್ಮತವಲ್ಲ: ಅಲಹಾಬಾದ್ ಹೈಕೋರ್ಟ್

ಶನಿವಾರ, 20 ಡಿಸೆಂಬರ್ 2014 (10:04 IST)
ಇತ್ತೀಚಿಗೆ ಕೇಳಿ ಬರುತ್ತಿರುವ ಲವ್ ಜಿಹಾದ್ ಪ್ರಕರಣಗಳ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು ಕೇವಲ ಮದುವೆ ಉದ್ದೇಶದಿಂದ ನಡೆಯುವ ಮತಾಂತರಕ್ಕೆ ಕಾನೂನಿನ ಸಮ್ಮತವಿಲ್ಲ ಎಂದು ಹೇಳಿದೆ.
ಅಂತರ್ಧರ್ಮೀಯ ವಿವಾಹವಾದ ಐದು ಜೋಡಿಗಳು ತಮ್ಮ ರಕ್ಷಣೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಕೇಸರ್ವಾನಿ ಈ ತೀರ್ಪನ್ನು ನೀಡಿದ್ದಾರೆ .ಮುಸ್ಲಿಂ ಧರ್ಮದಲ್ಲಿ ಬದ್ಧತೆ ಮತ್ತು ನಂಬಿಕೆ ಇಲ್ಲದೆ, ಕೇವಲ ಆ ಧರ್ಮದ ಯುವಕನನ್ನು ಮದುವೆಯಾದ ಕಾರಣಕ್ಕೆ ಧರ್ಮ ಪರಿವರ್ತನೆ ಮಾಡಿಕೊಳ್ಳುವುದನ್ನು ಕಾನೂನು ಒಪ್ಪುವುದಿಲ್ಲ  ಎಂದು ಕೋರ್ಟ್ ತಿಳಿಸಿದೆ. 
 
ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸೂರ್ಯಪ್ರಕಾಶ್ ಸರ್ವೋಚ್ಚ ನ್ಯಾಯಾಲಯ ನೀಡಿದ್ದ ಆದೇಶವನ್ನು ಉಲ್ಲೇಖಿಸಿದರು. ಇಸ್ಲಾಂ ಧರ್ಮದ ಮೇಲೆ ನಂಬಿಕೆ ಇಲ್ಲದ ಮುಸ್ಲಿಂಯೇತರರು ಕೇವಲ ಮದುವೆಯಾಗುವುದಕ್ಕೋಸ್ಕರ ಮತಾಂತರವಾದರೆ ಅದಕ್ಕೆ ಯಾವುದೇ ಕಾನೂನು ಸಮ್ಮತಿ ಇಲ್ಲ ಎಂದು 2000ರಲ್ಲಿ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿತ್ತು. 

ವೆಬ್ದುನಿಯಾವನ್ನು ಓದಿ