ಭಾರತದಲ್ಲೊಂದು ಪುಟಾಣಿ ಸಿಂಗಾಪುರ......!

ಭಾನುವಾರ, 17 ಆಗಸ್ಟ್ 2014 (12:37 IST)
ಇನ್ನು ಮುಂದೆ ಭಾರತೀಯರು ಸಿಂಗಾಪುರ ನೋಡಲು ಸಿಂಗಪುರಕ್ಕೇ ಹೋಗಬೇಕಾಗಿಲ್ಲ. ಸಿಂಗಪುರ ಮಾದರಿಯ ಸ್ಮಾರ್ಟ್ ಸಿಟಿಯು ಕೆಲವೇ ವರ್ಷದಲ್ಲಿ ಭಾರತದಲ್ಲಿಯೇ ನಿರ್ಮಾಣವಾಗಲಿದೆ.

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ನೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಭಾರತದಲ್ಲಿ ಮಾದರಿ ಸಿಂಗಾಪುರ ತಲೆ ಎತ್ತಲಿದೆ. ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ದೆಹಲಿ ಮುಂಬೈ ನಡುವಣ ಕೈಗಾರಿಕಾ ಕಾರಿಡಾರಿನಲ್ಲಿ ಸಿಂಗಪುರ ಮಾದರಿಯ `ಪುಟಾಣಿ ಸಿಂಗಪುರ' ನಿರ್ಮಿಸಿಕೊಡುವಂತೆ ಸಿಂಗಾಪುರದ ಉನ್ನತ ನಾಯಕರಲ್ಲಿ ಮನವಿ ಮಾಡಿದ್ದಾರೆ.
 
ಸಿಂಗಾಪುರದ ಪ್ರಧಾನಿ ಲೀ ಹೈಯ್ನ ಲೂಂಗ್ ಹಾಗೂ ಇನ್ನಿತರ ಅಧಿಕಾರಿಗಳ ಜತೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಸುಷ್ಮಾ ಈ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೆ ಇದೇ ವೇಳೆ ಜಲ ಸಂಪನ್ಮೂಲ ನಿರ್ವಹಣೆ, ನಗರಗಳ ಪುನರುತ್ಥಾನ, ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ, ಒಳಚರಂಡಿ ನೀರಿನ ಸಂಸ್ಕರಣೆ ಇನ್ನಿತರ ಕ್ಷೇತ್ರಗಳಲ್ಲಿ ಸಂಪೂರ್ಣ ಸಹಕಾರ ಮತ್ತು ನೆರವು ನೀಡುವುದಾಗಿ ಸಿಂಗಾಪುರ ನಾಯಕರು ಸುಷ್ಮಾ ಅವರಿಗೆ ಭರವಸೆ ನೀಡಿದ್ದಾರೆ .

ವೆಬ್ದುನಿಯಾವನ್ನು ಓದಿ