ಭೃಷ್ಟಾಚಾರವನ್ನು ಸಹಿಸುವುದಿಲ್ಲ: ಅರವಿಂದ ಕೇಜ್ರಿವಾಲ್

ಸೋಮವಾರ, 12 ಅಕ್ಟೋಬರ್ 2015 (14:39 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ತಮ್ಮ ಸರಕಾರದ ಅಡಿಯಲ್ಲಿ ಬರುವ ಇಲಾಖೆಗಳ ಮುಖ್ಯಸ್ಥರನ್ನು ಭೇಟಿ ಮಾಡಿ ತಮ್ಮ ತಮ್ಮ ವಿಭಾಗಗಳಲ್ಲಿ ಶೂನ್ಯ ಭ್ರಷ್ಟಾಚಾರವನ್ನು ಕಾಯ್ದುಕೊಳ್ಳುವಂತೆ ಖಡಕ್ ಆಗಿ ಸೂಚನೆ ನೀಡಿದ್ದಾರೆ.
 
'ಇಂದು ನಾನು ಎಲ್ಲ ಇಲಾಖೆಗಳ ಪ್ರಮುಖರನ್ನು ಭೇಟಿ ಮಾಡಿ ಅವರರವರ ವಿಭಾಗಗಳಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದು ನಿರ್ದೇಶನ ನೀಡಿದ್ದೇನೆ.ಎಷ್ಟು ದೊಡ್ಡ ಹುದ್ದೆಯಲ್ಲಿದ್ದರೂ ಸರಿ, ಲಂಚಗುಳಿತನವನ್ನು ನಾವು ಸಹಿಸುವುದಿಲ್ಲ', ಎಂದು ಅವರು ಟ್ವೀಟ್ ಮಾಡಿದ್ದಾರೆ.
 
ಇದಕ್ಕೂ ಮೊದಲು ಕೇಜ್ರಿವಾಲ್ ತಮ್ಮ ಪಕ್ಷದ ಎಲ್ಲ ಶಾಸಕರು ಮತ್ತು ಅವರ ಕುಟುಂಬದವರ ಜತೆ ಸಭೆ ನಡೆಸಿ ಭೃಷ್ಟತೆಯನ್ನು ಪ್ರದರ್ಶಿಸಿದ ಆಹಾರ ಸಚಿವ ಅಸಿಮ್ ಖಾನ್ ಅವರನ್ನು ವಜಾ ಮಾಡಿದ್ದರ ಬಗ್ಗೆ ಚರ್ಚಿಸಿದ್ದರು ಮತ್ತು ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದಂತೆ ಕಠಿಣ ಎಚ್ಚರಿಕೆ ನೀಡಿದ್ದರು.
 
ಇತ್ತ ತಮ್ಮನ್ನು ತಾವು ಸಮರ್ಥಿಸಿಕೊಂಡಿರುವ ಖಾನ್, ವಿರೋಧ ಪಕ್ಷದವರ ಸಂಚಿನಿಂದ ತಾವು ಈ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿದ್ದಾಗಿ ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ