ದೆಹಲಿಯಲ್ಲಿ ವರ್ಣರಂಜಿತ 66ನೇ ಗಣರಾಜ್ಯೋತ್ಸವ ಸಂಭ್ರಮ

ಸೋಮವಾರ, 26 ಜನವರಿ 2015 (10:37 IST)
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 66ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.
 
ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಆಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಇಂದು ರಾಜಪಥಕ್ಕೆ ಆಗಮಿಸಿದರು. ಒಬಾಮ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು.
 
ತಮ್ಮ ಬೀಸ್ಟ್ ಕಾರಿನಲ್ಲಿ ಭಾರತದ ಅಶ್ವದಳದ ಗೌರವದೊಂದಿಗೆ ರಾಜಪಥಕ್ಕೆ ಕರೆತರಲಾಯಿತು. ರಾಜಪಥಕ್ಕೆ ಆಗಮಿಸುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಅವರ ಪತ್ನಿ ಮಿಶೆಲ್ ಒಬಾಮ ಅವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
 
ಬಳಿಕ ರಾಷ್ಟ್ರಗೀತೆ ಜನಗಣ ಮನವನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ನಂತರ ಗಡಿಯಲ್ಲಿ ವೀರಮರಣವನ್ನಪ್ಪಿದ ಹುತಾತ್ಮ ಯೋಧರ ಕುಟುಂಬಸ್ಥರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದಕ ಪ್ರಧಾನ ಮಾಡಿದರು. ನಂತರ ಪರಮವೀರ ಚಕ್ರ ಪದಕ ವಿಜೇತ ಲೆಫ್ಟಿನೆಂಟ್ ಕಮಾಂಡರ್ ಸುಬ್ರತೋ ಮಿತ್ರಾ ಅವರ ಮುಂದಾಳತ್ವದಲ್ಲಿ ಪಥಸಂಚಲನ ನಡೆಯುತ್ತಿದೆ.
 
ಅಮರ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ
 
ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೂ ಮುನ್ನ ಅಮರ್ ಜವಾನ್ ಜ್ಯೋತಿ ಸ್ಮಾರಕ ಸ್ಥಳಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಗಲಿದ ಯೋಧರಿಗೆ ಗೌರವ ಸಲ್ಲಿಸಿದರು.

ವೆಬ್ದುನಿಯಾವನ್ನು ಓದಿ