ನವದೆಹಲಿ(ಮಾ.11): ಪ್ರಮುಖವಾಗಿ ನೋಟ್ ಬ್ಯಾನ್ ಸೇರಿದಂತೆ ಪ್ರಧಾನಮಂತ್ರಿ ಮೋದಿ ಕೈಗೊಂಡ ಆರ್ಥಿಕ ನೀತಿಗಳು ಮತ್ತು ಜನಪ್ರಿತೆಯೆ ಕೈಗನ್ನಡಿ ಎನ್ನಲಾಗುತ್ತಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ. ಬೆಳಗ್ಗೆ 8ರಿಂದಲೇ ಉತ್ತರಪ್ರದೇಶ, ಪಂಜಾಬ್, ಮಣಿಪುರ, ಉತ್ತರಾಖಂಡ್ ಮತ್ತು ಗೋವಾ ಪಂಜಾಬ್`ನಲ್ಲಿ ಮತ ಎಣಿಕೆ ಆರಂಭವಾಗಿದೆ.ಮಧ್ಯಾಹ್ನದ ಹೊತ್ತಿಗೆ ಬಹುತೇಕ ಟ್ರೆಂಡ್ ಸಿಗಲಿದೆ.
ರಾಜ್ಯ ಒಟ್ಟು ಸ್ಥಾನ ಬಹುಮತಕ್ಕೆ ಬೇಕಿರುವುದು
ಉತ್ತರಪ್ರದೇಶ 401 202
ಉತ್ತರಾಖಂಡ್ 70 36
ಗೋವಾ 40 21
ಪಂಜಾಬ್ 117 59
ಮಣಿಪುರ 60 31
ಉತ್ತರಪ್ರದೇಶ::ಅತಿ ಹೆಚ್ಚು ಸ್ಥಾನಗಳನ್ನ ಹೊಂದಿರುವ ಉತ್ತರ ಪ್ರದೇಶ ರಾಜ್ಯ ದೇಶದ ಗಮನ ಸೆಳೆದಿದೆ. ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಹೀಗಾಗಿ, ವಿಧಾನಸಭೆಯಲ್ಲಿ ಮೋದಿಯನ್ನ ಮಣಿಸಲು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಸಮೀಕ್ಷೆಗಳು ಬಿಜೆಪಿ ಪರ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದು, ಭಾರೀ ಕುತೂಹಲ ಕೆರಳಿಸಿದೆ.
ಪಂಜಾಬ್: ಪಂಜಾಬ್`ನಲ್ಲಿ ಇದೇ ಮೊದಲ ಬರಿಗೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಆಡಳಿತಾರೂಢ ಕಾಲಿದಳ ಮತ್ತು ಬಿಜೆಪಿ ವಿಪಕ್ಷ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪ್ರಬಲ ಪೈಪೋಟಿ ಒಡ್ಡಿವೆ. ಸಮೀಕ್ಷೆಗಳಲ್ಲಿ ಅಕಾಲಿದಳ ಮತ್ತು ಬಿಜೆಪಿ ಹೇಳ ಹೆರಿಲ್ಲದಂತೆ ಧೂಳೀಪಟವಾಗಲಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಹೆಚ್ಚು ಸ್ಥಾನ ಪಡೆಯಲಿವೆ ಎಂದು ಹೇಳಲಾಗಿದೆ.
ಉತ್ತರಾಖಂಡ್; ಇಲ್ಲಿಯೂ ಸಹ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಇದೆ. ಮುಖ್ಯಮಂತ್ರಿ ಹರೀಶ್ ರಾವತ್`ಗೆ ಪಕ್ಷದ ಆಂತರಿಕ ಕಚ್ಚಾಟ, ಡಳಿತ ವಿರೋಧಿ ಅಲೆಗಳ ಬಿಸಿ ತಟ್ಟುವ ಸಧ್ಯತೆ ಇದೆ. ಸಮೀಕ್ಷೆಗಳು ಇಲ್ಲಿ ಬಿಜೆಪಿ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ.
ಗೋವಾ: ನೆರೆಯ ಗೋವಾದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಕನಸು ಕಾಣುತ್ತಿದೆ. ಬಹುಮತಕ್ಕೆ ಕಷ್ಟವಾಗಲಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದೆ ಎಂದಿವೆ ಸಮೀಕ್ಷೆಗಳು.
ಇತ್ತ, ಮಣಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ.