ಸಾಲಕ್ಕಾಗಿ ದಂಪತಿ ಕೊಲೆ ಪ್ರಕರಣ: ಒಬ್ಬನ ಬಂಧನ

ಬುಧವಾರ, 27 ಏಪ್ರಿಲ್ 2016 (08:18 IST)
ಪುಲಕೇಶಿನಗರದಲ್ಲಿ ಕಳೆದ ಏಪ್ರೀಲ್ 21 ರಂದು ನಡೆದಿದ್ದ ದಂಪತಿಗಳ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಸಾಲ ನೀಡಲು ನಿರಾಕರಿಸಿದ್ದೇ ಈ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. 
 
ಕೋಲ್ಸ್ ರಸ್ತೆಯ ನಿವಾಸಿಗಳಾದ ಪರ್ವತರಾಜ್ (61) ಹಾಗೂ ಚಂದ್ರಕಲಾ (55) ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಚಂದ್ರಕಲಾ ಅವರ ಕತ್ತು ಕೊಯ್ದಿದ್ದರೆ, ಪರ್ವತರಾಜ್ ಅವರಿಗೆ 25 ಬಾರಿ ಇರಿದು ಕೊಲ್ಲಲಾಗಿತ್ತು. ಬಂಧಿತ ಆರೋಪಿಯನ್ನು ಪ್ರೇಮ್‌ಚಂದ್ ಜೈನ್ (35) ಎಂದು ಗುರುತಿಸಲಾಗಿದ್ದು ಇನ್ನೊಬ್ಬ ಆರೋಪಿ ಚಂದ್ರಶೇಖರ್ (36) ನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 
 
ಆರೋಪಿ ಪ್ರೇಮ್‌ಚಂದ್ ವೃದ್ಧ ದಂಪತಿಗೆ 15 ವರ್ಷಗಳಿಂದ ಪರಿಚಯಸ್ಥನಾಗಿದ್ದು ಆತ್ಮೀಯ ಸಂಬಂಧವನ್ನು ಇಟ್ಟುಕೊಂಡಿದ್ದ. 
ತನ್ನ ಸ್ನೇಹಿತ ಚಂದ್ರಶೇಖರ್‌ನಿಗಾಗಿ 50 ಸಾವಿರ ರೂ ನೀಡುವಂತೆ ವೃದ್ಧ ದಂಪತಿಗಳ ಬಳಿ ಕೇಳಿಕೊಂಡಿದ್ದ. ಆದರೆ ಮಗನ ಮದುವೆಗೆ ತಯಾರಿ ನಡೆಸುತ್ತಿರುವುದರಿಂದ ಸಾಲ ನೀಡಲಾಗುವುದಿಲ್ಲ ಎಂದು ದಂಪತಿಗಳು ಹೇಳಿದ್ದರು. ಹೀಗಾಗಿ ಹಣ ಪಡೆಸಲು ಆರೋಪಿಗಳು ಕೊಲೆ ತಂತ್ರ ರೂಪಿಸಿದರು.
 
ದಂಪತಿಗಳ ಮಗನ ಮದುವೆಗೆಹಣ ಮತ್ತು ಚಿನ್ನಾಭರಣವನ್ನು ದಂಪತಿ ಸಂಗ್ರಹಿಸಿರಬೇಕು. ಇವರನ್ನು ಹತ್ಯೆ ಮಾಡಿದರೆ ಕೈ ತುಂಬ ಹಣ ಸಿಗುತ್ತದೆ ಎಂದು ಸ್ಕೆಚ್ ಹಾಕಿ ಇಬ್ಬರನ್ನು ಕೊಂದು  ಚಿನ್ನಾಭರಣ ಮತ್ತು ನಗದು ದೋಚಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ