ಮಾಜಿ ಮುಖ್ಯಮಂತ್ರಿಗೆ ನ್ಯಾಯಾಲಯದಿಂದ 3 ಲಕ್ಷ ರೂ. ದಂಡ

ಸೋಮವಾರ, 1 ಸೆಪ್ಟಂಬರ್ 2014 (18:55 IST)
ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಪದೇ ಪದೇ ಗೈರು ಹಾಜರಾದ ದೆಹಲಿ ಮಾಜಿ ಮುಖ್ಯಮಂತ್ರಿ, ಕೇರಳದ ಮಾಜಿ ರಾಜ್ಯಪಾಲರಾದ ಶೀಲಾ ದೀಕ್ಷಿತ್‌ಗೆ ನ್ಯಾಯಾಲಯ ರು.3ಲಕ್ಷ ದಂಡವನ್ನು ವಿಧಿಸಿದೆ. 
 
ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ತಮ್ಮ ಬಗ್ಗೆ ಅಸಭ್ಯ ಪದಗಳನ್ನು ಬಳಸಿದ್ದಾರೆ ಎಂದು ದೀಕ್ಷಿತ್ ವಿರುದ್ಧ ದೂರು ಸಲ್ಲಿಸಿದ್ದರು. ಅದಾದ ಬಳಿಕ ಸ್ವತಃ ದೀಕ್ಷಿತ್ ವಿಚಾರಣೆಗೆ ಗೈರು ಹಾಜರಾಗುತ್ತಾ ಬಂದರು. ಅದಕ್ಕಾಗಿ ರು.5000 ದಂಡವನ್ನು ಕಟ್ಟುವಂತೆ ಕೋರ್ಟ್ ಆದೇಶಿಸಿತ್ತು.
 
ಜನವರಿಯಲ್ಲಿ ದೀಕ್ಷಿತ್ ದಂಡವನ್ನು ಭರಿಸಿದ್ದರು. ನಂತರ ಗುಪ್ತಾ, ಶೀಲಾ ದೀಕ್ಷಿತ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಈ ಪ್ರಕರಣ ಸಂಬಂಧವೂ ದೀಕ್ಷಿತ್ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ. ಹೀಗಾಗಿ ಕೋರ್ಟ್ ದೀಕ್ಷಿತ್ ಅವರಿಗೆ ದಂಡ ವಿಧಿಸಿದೆ.
 
ಇದೇ ವೇಳೆ ಕೇರಳದ ರಾಜ್ಯಪಾಲರ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ರಾಜಕೀಯ ಕೆಲಸಗಳಲ್ಲಿ ಶೀಲಾ ದೀಕ್ಷಿತ್ ಬ್ಯುಸಿಯಾಗಿದ್ದಾರೆ. ಹೀಗಾಗಿ ಹಾಜರಾಗಲು ಸಾಧ್ಯವಾಗಿಲ್ಲ ಎಂಬುದು ವಕೀಲರ ವಾದ.

ವೆಬ್ದುನಿಯಾವನ್ನು ಓದಿ