ಸತ್ತ ಶವಗಳ ಪಕ್ಕ ಕಾಂಡೋಮ್‌ ಪತ್ತೆ

ಗುರುವಾರ, 31 ಜುಲೈ 2014 (19:29 IST)
ಹೈ ಪ್ರೊಫೈಲ್‌ ಬಡಾವಣೆಯ ಒಂದು ಮನೆಯಲ್ಲಿ ಮೂರು ಶವಗಳು ಮತ್ತು ಶವಗಳ ಹತ್ತಿರ ಬಿದ್ದಿರುವ ಕಾಂಡೋಮ್‌ಗಳು ಮತ್ತು ಲೈಂಗಿಕ ಶಕ್ತಿ ವರ್ಧಕ ಔಷಧಿಗಳ ಪ್ಯಾಕೆಟ್‌‌ ಪತ್ತೆಯಾಗಿರುವುದು ಪೊಲೀಸರ ನಿದ್ದೆಗೆಡಿಸಿದೆ. 
 
ಗಾಜಿಯಾಬಾದ್‌ನ ಲೋನಿ ಕ್ಷೇತ್ರದ ಡಿಎಲ್‌‌ಎಫ್‌ ಕಾಲೋನಿಯಲ್ಲಿರುವ ಮನೆಯಲ್ಲಿ ರಕ್ತದ ಕಲೆಗಳನ್ನು ಪರೀಕ್ಷಿಸಿ ವಿಚಾರಣೆ ನಡೆಸಿದಾಗ ಮೃತ ಮಹಿಳೆಯ ಮಗನಿಂದ ಬಹಿರಂಗವಾದ ಸತ್ಯ ಪೋಲಿಸರು ಮತ್ತು ಜನರಿಗೆ ಆಘಾತ ಮೂಡಿಸಿದೆ. 
 
ಪಕ್ಕದ ಮನೆಯಲ್ಲಿ ವಾಸನೆ ಬರುತ್ತಿದೆ ಎಂದು ನೆರೆಮನೆಯವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ  ತಕ್ಷಣ ಪೋಲಿಸರು ಘಟನಾ ಸ್ಥಳಕ್ಕೆ ಬಂದಾಗ ಮನೆಯ ಬಾಗಿಲು ಮುಚ್ಚಿತ್ತು. ಪೋಲಿಸರು ಬಾಗಿಲು ಬಡಿದಾಗ ಯಾವುದೇ ಉತ್ತರ ಬರಲಿಲ್ಲ, ಆಗ ಪೋಲಿಸರು ಮನೆಯ ಬಾಗಿಲು ಮುರಿದು ನುಗ್ಗಿದ್ದಾರೆ. ಮನೆಯಲ್ಲಿ ಪತ್ತೆಯಾದ ಮೂರು ಶವಗಳನ್ನು ನೋಡಿ ಪೊಲೀಸರು ದಂಗಾಗಿ ಹೋಗಿದ್ದಾರೆ. 
 
ಮೂಲಗಳ ಪ್ರಕಾರ, ಪೋಲಿಸರು ಮನೆಯೊಳಗಡೆ ಹೋದಾಗ ಮನೆಯಲ್ಲಿರುವ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಮನೆಯಲ್ಲಿ ಮೂರು ಶವಗಳು ಕಂಡುಬಂದಿವೆ. ವಿಶೇಷವೆಂದರೆ ಶವಗಳ ಹತ್ತಿರ ಅನೇಕ ಕಾಂಡೋಮ್‌ಗಳು ಮತ್ತು ಲೈಂಗಿಕ ಶಕ್ತಿ ಹೆಚ್ಚಿಸುವ ಔಷಧಗಳ ಪಾಕೆಟ್‌‌ಗಳು ಕಂಡುಬಂದಿವೆ. 
 
ಸ್ಥಳೀಯ ಜನರು ಶವಗಳನ್ನು ಗುರುತಿಸಿದ ಪ್ರಕಾರ ಸುನೀಲ್, ರೇಖಾ ಮತ್ತು ಖುಶ್ಬೂ ಎಂದೆನ್ನಲಾಗಿದೆ. ಈ ಶವಗಳನ್ನು ನೋಡಿದಾಗ ಇವರ ಸಾವು, ಎರಡು ಮೂರು ದಿನಗಳ ಹಿಂದೆ ಆಗಿದೆ ಎಂದು ತಿಳಿದು ಬರುತ್ತದೆಂದು ಎಸ್‌‌ಪಿ ಜಗದೀಶ್‌ ಶರ್ಮಾ ತಿಳಿಸಿದ್ದಾರೆ. 
 
ಪೋಲಿಸರಿಗೆ ದೊರೆತ ಮಾಹಿತಿ ಪ್ರಕಾರ, ಈ ಮನೆಯಲ್ಲಿ ಮೂರು ಶವಗಳ ಪತ್ತೆಯಾಗಿವೆ. ಅದರಲ್ಲಿ ನಲವತ್ತು ವರ್ಷದ ಸುನೀಲನದ್ದಾಗಿದೆ. ಸುನೀಲ್ ಮತ್ತು ರೇಖಾ ಲಿವ್‌ ಇನ್‌ ರಿಲೆಶನ್‌‌ಶಿಪ್‌‌ನಲ್ಲಿ ವಾಸವಿರುತ್ತಿದ್ದರು. ಜೊತೆಗೆ ರೇಖಾಳ ಸಣ್ಣ ಮಗಳು ಖುಶ್ಬೂ ಕೂಡ ವಾಸವಿರುತ್ತಿದ್ದಳು. ರೇಖಾಳ ಪತಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದ. ತನ್ನ ಮೊದಲ ಪತಿಯಿಂದ ರೇಖಾಗೆ ಮೂರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿದ್ದರು. 
 
ರೇಖಾಳ ಚಿಕ್ಕ ಮಗ ತನ್ನ ತಾಯಿಯನ್ನು ಬೇಟಿಯಾಗಲು ಆವಾಗಾವಾಗ ಬರುತ್ತಿದ್ದನು. ಅವನು ಎರಡು ದಿನಗಳ ಹಿಂದೆ ತನ್ನ ಹಿರಿಯ ಸಹೋದರಿಯ ಜೊತೆಗೆ ತಾಯಿಯನ್ನು ಬೇಟಿಯಾಗಲು ಬಂದಿದ್ದನು. ಆದರೆ ಮನೆಗೆ ಕೀಲಿ ಹಾಕಲಾಗಿತ್ತು. 
 
ರವಿವಾರ ಮನೆಯಲ್ಲಿ ಶವಗಳನ್ನು ನೋಡಿದಾಗ ಗಾಬರಿಯಾಗಿದ್ದಾರೆ. ಪೋಲಿಸರು ಪ್ರಕರಣದ ಕುರಿತು ತನಿಖೆ ನಡೆಸಿದಾಗ, ರೇಖಾಳ ಮಗ ಕೆಲವು ವಿಷಯಗಳನ್ನು ಬಹಿರಂಗ ಪಡಿಸಿದ್ದಾನೆ. ಸುನೀಲ್ ನನ್ನ ತಾಯಿಗೆ ನಶೆಯ ಮಾತ್ರಗಳನ್ನು ನೀಡುತ್ತಿದ್ದ. ಮನೆಯಲ್ಲಿ ಕೆಲ ಯುವತಿಯರು ಮತ್ತು ಯುವಕರು ಕೂಡಾ ಬರುತ್ತಿದ್ದರು. ಅವರಿಗೂ ಸುನೀಲ್ ನಶೇಯ ಮಾತ್ರಗಳನ್ನು ನೀಡುತ್ತಿದ್ದರು ಎಂದು ರೇಖಾಳ ಮಗ ಪೋಲಿಸರಿಗೆ ಬಾಯಿ ಬಿಟ್ಟಿದ್ದಾನೆ. 
 
" ತನಿಖೆ ನಡೆಸಲಾಗುತ್ತಿದೆ, ಆದರೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂದು ಇನ್ನು ಬಹಿರಂಗವಾಗಿಲ್ಲ ಎಂದು ಎಸ್‌‌ಪಿ ಜಗದೀಶ್ ಶರ್ಮಾ ತಿಳಿಸಿದ್ದಾರೆ. 
 
ಪೋಲಿಸರು ಇದನ್ನು ಆತ್ಮಹತ್ಯೆ ಎಂದು ಒಪ್ಪುತ್ತಿಲ್ಲ. ಇದು ಸಾಮೂಹಿಕ ಆತ್ಮಹತ್ಯೆಯೋ ಅಥವಾ ಯಾರಾದರು ಒಬ್ಬರು ಇಬ್ಬರನ್ನು ಕೊಲ್ಲಿ ಆಮೇಲೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೊ ಎನ್ನುವುದು ಗೊತ್ತಾಗುತ್ತಿಲ್ಲ. ತನಿಖೆಯ ನಂತರ ಸತ್ಯ ಬಹಿರಂಗವಾಗಲಿದೆ ಎಂದು ಪೋಲಿಸರು ತಿಳಿಸಿದ್ದಾರೆ . 

ವೆಬ್ದುನಿಯಾವನ್ನು ಓದಿ