ಕೆಟ್ಟ ಮಹಿಳೆಯ ಸಂಗ ಮಾಡಿದ ಪತ್ನಿಯನ್ನೇ ಕೊಂದ ಪತಿ

ಶುಕ್ರವಾರ, 1 ಆಗಸ್ಟ್ 2014 (17:31 IST)
ಸಾಹೇಬರೆ, ನನ್ನ ಪತ್ನಿ ಬಹಳಷ್ಟು ಒಳ್ಳೆಯವಳಾಗಿದ್ದಳು. ಆದರೆ ಕೆಲ ತಿಂಗಳಿನಿಂದ ಒಬ್ಬ ಕೆಟ್ಟ ಮಹಿಳೆಯ ಜೊತೆಗೆ ಸ್ನೇಹ ಬೆಳೆಸಿದ್ದಾಳೆ. ಹಗಲು ಮತ್ತು ರಾತ್ರಿ ಹೇಳದೆ ಕೇಳದೆ ಮಹಿಳೆಯ ಜೊತೆಗೆ ಹೋಗುತ್ತಾಳೆ. ಹಲವು ಬಾರಿ ಬೇಡ ಎಂದು ಹೇಳಿದೆ ಆದರೆ ಅವಳು ನನ್ನ ಮಾತಿಗೆ ಮನ್ನಣೆ ನೀಡದೆ ಆಕೆಯ ಜೊತೆಗೆ ಹೋಗುತ್ತಿದ್ದಳು. ಇದಕ್ಕಾಗಿ ಆಕೆಯನ್ನು ಹತ್ಯೆ ಮಾಡಿದ್ದೇನೆ ಎಂದು ಪತ್ನಿಯ ಹತ್ಯೆಯಡಿ ಬಂಧಿತನಾದ ಪೂರನ್‌ ಸಿಂಗ್‌ ಜೈಲಿಗೆ ಹೋಗುವ ಮೊದಲು ಪೋಲಿಸರಿಗೆ ಈ ವಿಷಯ ತಿಳಿಸಿದ್ದಾನೆ. 
 
ಸೋಮವಾರ-ಮಂಗಳವಾರದ ನಡುವೆ ಮಧ್ಯ ರಾತ್ರಿ ಪೂರನ್‌ ತನ್ನ ಪತ್ನಿ ಸುನೀತಾಳ ತಲೆಗೆ ರಾಡಿನಿಂದ ಹೊಡೆದು ಹತ್ಯೆ ಮಾಡಿದ್ದ. ರಾಡಿನಿಂದ  ಹೊಡೆತ ಎಷ್ಟು ತೀವೃವಾಗಿತ್ತು ಎಂದರೆ ಸುನೀತಾಳ ತಲೆಗೆ ಹೊಡೆದ ರಾಡ್‌ನಿಂದ ನೆಲದಲ್ಲಿ ತಗ್ಗು ಉಂಟಾಗಿತ್ತು. 
 
ಪೂರನ್‌‌‌‌‌ನನ್ನು ಬಂಧಿಸಿದ ನಂತರ ರಾತ್ರಿ ಪೂರ್ತಿ ಪೋಲಿಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸುನೀತಾ ಕೆಟ್ಟ ಮಹಿಳೆಯ ಜೊತೆಗೆ ಮನೆಯಿಂದ ಹೊರಗಡೆ ಹೋಗುವುದು ಆತನಿಗೆ ಸರಿಕಂಡಿರಲಿಲ್ಲ. ಅಷ್ಟಕ್ಕು ಆ ಕೆಟ್ಟ ಮಹಿಳೆ ಯಾರು, ಮತ್ತು ಆಕೆಯ ಜೊತೆ ಸುನೀತಾ ಮನೆಯಿಂದ ಯಾವ ಕಾರಣಕ್ಕಾಗಿ ಹೊರಗಡೆ ಹೋಗುತ್ತಿದ್ದಳು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
  
ಪೂರನ್‌‌ಗೆ ನ್ಯಾಯಾಲದಲ್ಲಿ ಕರೆದೊಯ್ದು ನಂತರ ಜೈಲಿಗೆ ಕಳುಹಿಸಲಾಗಿದೆ. ನ್ಯಾಯಾಲಯದಲ್ಲಿ ಪೂರನ್, ತನ್ನ ಪತ್ನಿ ಸುನೀತಾ ಹೇಳದೆ ಕೇಳದೆ ಬೇರೆ ಮಹಿಳೆಯ ಜೊತೆಗೆ ಹೋಗುತ್ತಿದ್ದಳು ಎಂದು ತಿಳಿಸಿದ್ದಾನೆ. 

ವೆಬ್ದುನಿಯಾವನ್ನು ಓದಿ