ಮಹಿಳೆಯರ ಮೇಲಿನ ದೌರ್ಜನ್ಯ: ಬೆಂಗಳೂರಿಗೆ ಪ್ರಥಮ ಸ್ಥಾನ

ಶುಕ್ರವಾರ, 26 ಫೆಬ್ರವರಿ 2016 (10:43 IST)
ಸಂಪೂರ್ಣ ರಾಜ್ಯದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಥಮ ಸ್ಥಾನ ಲಭಿಸಿದೆ.
 
ರಾಜ್ಯ ಪೊಲೀಸ್ ಇಲಾಖೆ ಬಿಡುಗಡೆಗೊಳಿಸಿರುವ ಅಪರಾಧಗಳ ಅಂಕಿಅಂಶಗಳ ಪ್ರಕಾರ (2012, 2013, 2014) ರಾಜ್ಯದಲ್ಲಿ ನಡೆದ ಮಹಿಳೆಯರ ವಿರುದ್ಧದ ಅಪರಾಧದಲ್ಲಿ ಬೆಂಗಳೂರು ಒಂದರಲ್ಲೇ 27 ರಷ್ಟು ಪ್ರಕರಣಗಳು ದಾಖಲಾಗಿವೆ.  
 
ನಗರದಲ್ಲಿ ಒಟ್ಟು 4,862 ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 83 ಕೊಲೆ ಪ್ರಕರಣಗಳು, 104 ಲೈಂಗಿಕ ದೌರ್ಜನ್ಯ, 57 ವರದಕ್ಷಿಣೆ ಸಾವು, 618 ಅಪಹರಣದ ಪ್ರಕರಣಗಳು ಬೆಳಕಿಗೆ ಬಂದಿವೆ. 
 
2014ರಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ 13 ಪ್ರತಿಶತ ಮಹಿಳೆಯರ ಮೇಲೆ ನಡೆದಿದ್ದಾಗಿವೆ. ಸಂಪೂರ್ಣ ರಾಜ್ಯದಲ್ಲಿ  1,37,338  ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 17,792 ಪ್ರಕರಣಗಳು ಮಹಿಳೆಯರ ವಿರುದ್ಧ ನಡೆದಿದ್ದಾಗಿವೆ (ಅತ್ಯಾಚಾರ, ಅಪಹರಣ, ವರದಕ್ಷಿಣೆ ಹಿಂಸೆ ಲೈಂಗಿಕ ದೌರ್ಜನ್ಯ). 
 
2015ರ ಅಂಕಿಅಂಶಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದಲ್ಲಿ ಯಾವುದೇ ರೀತಿಯ ಇಳಿಮುಖವಾಗಿಲ್ಲ ಎಂದು ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ