ಶಿವ ಶಿವ ! ನಾಲ್ಕು ಮಕ್ಕಳ ತಾಯಿ ಪ್ರೇಮಿಯೊಂದಿಗೆ ಸೇರಿ ಪತಿಯನ್ನೆ ಹತ್ಯೆ ಮಾಡಿದ್ದಾಳೆ.

ಬುಧವಾರ, 30 ಜುಲೈ 2014 (17:19 IST)
ಉತ್ತರ ಪ್ರದೇಶದ ಮೇರಠ್ ಜಿಲ್ಲೆಯ ಮೆಡಿಕಲ್‌ ಕ್ಷೇತ್ರದ ಠಾಣಾ ವ್ಯಾಪ್ತಿಯಲ್ಲಿ ನಾಲ್ಕು ಮಕ್ಕಳ ತಾಯಿಯೊಬ್ಬಳು  ಪ್ರೀಯಕರನೊಂದಿಗೆ ಸೇರಿ ತನ್ನ ಪತಿಯನ್ನೆ ಹತ್ಯೆ ಮಾಡಿದ ಹೇಯ ಘಟನೆ ವರದಿಯಾಗಿದೆ. 
 
ಆರೋಪಿ ಮಹಿಳೆಯ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆಕೆ ಮತ್ತು ಆಕೆಯ ಪ್ರೀಯಕರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
 
40 ವರ್ಷ ವಯಸ್ಸಿನ ಮದನ್‌ಲಾಲ್ ಹತ್ಯೆಯ ಆರೋಪಿ ಮಹಿಳೆಯ ಪ್ರೀಯಕರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದರೆ, ಪ್ರಮುಖ ಆರೋಪಿ ಮಹಿಳೆ ಪರಾರಿಯಾಗಿದ್ದಾಳೆ ಎಂದು ಜಿಲ್ಲಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. 
 
ಸೋಫಿಪುರ್ ಗ್ರಾಮದ ನಿವಾಸಿ ಮದನ್‌‌ಲಾಲ್‌‌ನ ಪತ್ನಿ ಮಾಯಾ, ಕಳೆದ ಎರಡು ವರ್ಷಗಳಿಂದ ತನ್ನ ಪತಿ ಮತ್ತು ತನ್ನ ನಾಲ್ಕು ಮಕ್ಕಳನ್ನು ತೊರೆದು ಮೆಡಿಕಲ್‌‌ ಠಾಣೆ ಕ್ಷೇತ್ರದ ರಾಜೀವ್‌‌ ಪುರಂ ಕ್ಷೇತ್ರದಲ್ಲಿ ತನ್ನ ಪ್ರೀಯಕರ ಪ್ರೇಮ್‌‌ ಸಿಂಗ್‌‌ ಜೊತೆಗೆ ವಾಸಿಸುತ್ತಿದ್ದಳು. ಕಳೆದ ಸೋಮವಾರದಂದು ಮದನ್‌‌ಲಾಲ್‌ ತನ್ನ ಪತ್ನಿಯ ಭೇಟಿಗೆ ಬಂದಾಗ.ಅಸಹಜ ಸಾವನ್ನಪ್ಪಿದ್ದ. 
 
ಈ ಪ್ರಕರಣದಲ್ಲಿ ಸಾವನ್ನಪ್ಪಿದ ಮದನ್‌‌ಲಾಲ್‌ನ ಹಿರಿಯ ಪುತ್ರ ಜೋಗೆಂದ್ರ, ತನ್ನ ತಂದೆಯ ಹತ್ಯೆಯಲ್ಲಿ ತಾಯಿ ಮತ್ತು ತಾಯಿಯ ಪ್ರೇಮಿಯ ಕೈವಾಡವಿದೆ ಎಂದು ಫೋಲಿಸರಿಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾನೆ. ಮೃತ ಮದನ್‌‌ಲಾಲನ್‌ನ ಮರಣೋತ್ತರ ಪರೀಕ್ಷೆ ಮಾಡಲಾಗಿದೆ ಎಂದು ಪೋಲಿಸ್‌ ವಕ್ತಾರರು ತಿಳಿಸಿದ್ದಾರೆ.
 
ಪೊಲೀಸರು ಆರೋಪಿಯ ವಿಚಾರಣೆ ನಡೆಸುತ್ತಿರುವ ಸಂದರ್ಭದಲ್ಲಿ ಮದನ್‌‌ಲಾಲ್‌ ಹೆಚ್ಚು ಮದ್ಯ ಸೇವನೆ ಮಾಡಿದ್ದರಿಂದ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೋಲಿಸರು ಪರಾರಿಯಾದ ಮಹಿಳೆಯ ಬಂಧನಕ್ಕೆ ಜಾಲ ಬೀಸಿದ್ದಾರೆ.

ವೆಬ್ದುನಿಯಾವನ್ನು ಓದಿ