ಮೋದಿ ವಿದೇಶಿ ಪ್ರವಾಸ ಟೀಕಿಸುವುದರಿಂದ ರಾಷ್ಟ್ರದ್ರೋಹಿಗಳಿಗೆ ಪರೋಕ್ಷ ಪ್ರೊತ್ಸಾಹ: ಬಿಜೆಪಿ ಮುಖಂಡ

ಶುಕ್ರವಾರ, 29 ಜನವರಿ 2016 (17:15 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸವನ್ನು ವಿಪಕ್ಷಗಳು ಟೀಕಿಸುವುದರಿಂದ ರಾಷ್ಟ್ರದ್ರೋಹಿಗಳಿಗೆ ಪರೋಕ್ಷವಾಗಿ ಪ್ರೊತ್ಸಾಹಿಸಿದಂತಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಲ್.ಗಣೇಶನ್ ಹೇಳಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದೇಶಿ ಬಂಡವಾಳ ಹೂಡಿಕೆ ಮತ್ತು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟದ ಬೆಂಬಲ ಪಡೆಯಲು ಪ್ರಧಾನಿ ಮೋದಿ ವಿದೇಶ ಪ್ರವಾಸಗೈಯುತ್ತಾರೆ ಎಂದು ತಿಳಿಸಿದ್ದಾರೆ. 
 
ಕೊಯಿಮೂತ್ತೂರ್‌ ನಗರದಲ್ಲಿ ಬಿಜೆಪಿ ಬೃಹತ್ ಸಾರ್ವಜನಿಕ ಸಭೆ ಫೆಬ್ರವರಿ 2 ರಂದು ನಡೆಯಲಿದ್ದು ಪ್ರಧಾನಿ ಮೋದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
 
ಪ್ರಧಾನಿ ಮೋದಿಯವರ ಸರಕಾರ ಲಂಕಾ ಸರಕಾರದೊಂದಿಗೆ ಮೈತ್ರಿಯೊಂದಿಗೆ ಸಹಕರಿಸುತ್ತಿದ್ದರಿಂದ ಲಂಕಾದಲ್ಲಿ ಸೇನೆ ಕಬಳಿಸಿದ ನಿರಾಶ್ರಿತರ ಸ್ವಂತ ಭೂಮಿ, ಮನೆಗಳು ವಾಪಸ್ ದೊರೆಯುವಂತಹ ವಾತಾವರಣ ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
 
ಕೇಂದ್ರ ಸರಕಾರ ಲಂಕಾದಲ್ಲಿ ನೆಲೆಸಿರುವ ತಮಿಳರಿಗೆ ಸಂಪೂರ್ಣ ಬೆಂಬಲ ನೀಡಲಿದ್ದು, ಮೀನುಗಾರರ ಬಿಡುಗಡೆಗೆ ಲಂಕಾ ಸರಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎಲ್.ಗಣೇಶನ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ