ಶೀನಾಳದ್ದು ಮರ್ಯಾದಾ ಹತ್ಯೆಯೇ ?: ಪ್ರಕರಣದಲ್ಲಿ ಹೊಸ ತಿರುವು

ಗುರುವಾರ, 27 ಆಗಸ್ಟ್ 2015 (11:37 IST)
ಸ್ಟಾರ್ ಇಂಡಿಯಾ ಟಿವಿ ಮಾಜಿ ಸಿಇಓ ಪೀಟರ್ ಮುಖರ್ಜಿ ಪತ್ನಿ ಇಂದ್ರಾಣಿ ಮುಖರ್ಜಿ ಅವರು ತಮ್ಮ ಮಗಳನ್ನೇ ಕೊಲೆ ಮಾಡಿರುವ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಶೀನಾ ಬೋರಾ ಇಂದ್ರಾಣಿಯ ತಂಗಿ ಅಲ್ಲ ಮಗಳು ಎಂಬ ಸತ್ಯ ಬೆಳಕಿಗೆ ಬಂದ ಹಿನ್ನೆಲೆಯಲ್ಲೇ ಪ್ರಕರಣ ಮತ್ತೆ ಮಹತ್ವದ ನಾಟಕೀಯ ತಿರುವು ಪಡೆದುಕೊಳ್ಳುತ್ತಿದ್ದು ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನವನ್ನು ಹುಟ್ಟಿಹಾಕಿದೆ. 

ಶೀನಾ ತನ್ನ ಸಹೋದರಿ. ಆಕೆ ಇಂದ್ರಾಣಿ ತಂಗಿಯಲ್ಲ, ಮಗಳು. ಆಕೆಯನ್ನು ತಮ್ಮ ತಾಯಿಯೇ ಕೊಲೆ ಮಾಡಿಸಿದ್ದಾಳೆ. ಆಕೆಯ  ಕುರಿತಂತೆ ತಾಯಿಯ ಬಳಿ ವಿಚಾರಿಸಿದಾಗಲೆಲ್ಲಾ ಆಕೆ ವಿದೇಶದಲ್ಲಿದ್ದಾಳೆಂದು ತಮ್ಮ ಬಳಿ ಸುಳ್ಳು ಹೇಳಿದ್ದಾಗಿ ಇಂದ್ರಾಣಿ ಮುಖರ್ಜಿ ಪುತ್ರ ಮಿಖಿಲ್ ಬೋರಾ ತಿಳಿಸಿದ್ದಾನೆ.
 
ಶೀನಾ ಬೋರಾ ತನ್ನ ತಾಯಿಯ ಈಗಿನ ಪತಿಯಾದ ಪೀಟರ್ ಮುಖರ್ಜಿಯ ಮೊದಲ ಪತ್ನಿಯ ಮಗ ರಾಹುಲ್ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದೇ ಆಕೆಯ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. 
 
"ಶೀನಾ ಮತ್ತು ನನ್ನ ಮೊದಲ ಪತ್ನಿಯ ಮಗನ ನಡುವೆ ಪ್ರೇಮ ಸಂಬಂಧವಿತ್ತು. ಒರಸೆಯಲ್ಲಿ ಅವರಿಬ್ಬರು ಅಣ್ಣ- ತಂಗಿಯರಾಗಿದ್ದರಿಂದ ಅವರಿಬ್ಬರ ಸಂಬಂಧ ಇಂದ್ರಾಣಿಗೆ ಇಷ್ಟವಿರಲಿಲ್ಲ. ಶೀನಾ ನನ್ನ ತಂಗಿ ಎಂದು ಇಂದ್ರಾಣಿ ನನ್ನಲ್ಲಿ ಹೇಳಿದ್ದಳು. ಆದರೆ ಆಕೆ ಅವಳ ಮೊದಲ ಪತಿಯ ಮಗಳು ಎಂದು ನನಗೆ ಈಗಷ್ಟೇ ತಿಳಿದುಬಂದಿದ್ದು", ಎಂದು ಸ್ಟಾರ್ ಇಂಡಿಯಾ ಮಾಜಿ ಸಿಇಓ ಪೀಟರ್ ಮುಖರ್ಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂದ್ರಾಣಿ ಹಾಗೂ ಪೀಟರ್ ಮುಖರ್ಜಿ 2002ರಲ್ಲಿ ವಿವಾಹವಾಗಿದ್ದರು.
 
"ಶೀನಾ 2012ರಲ್ಲಿ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು. ಈ ಬಗ್ಗೆ ಪತ್ನಿ ಇಂದ್ರಾಣಿಯಲ್ಲಿ ವಿಚಾರಿಸಿದಾಗ ಶೀನಾ ಅಮೆರಿಕಾದಲ್ಲಿ ಓದುತ್ತಿದ್ದಾಳೆ ಎಂದಾಕೆ ನಂಬಿಸಿದ್ದಳು. ಅವಳು ಅಮೇರಿಕಾದಲ್ಲಿ ದೀಪಾವಳಿ ಆಚರಿಸುತ್ತಿದ್ದಾಳೆ ಎನ್ನುವುದನ್ನು ತೋರಿಸುವ ಫೋಟೋಗಳನ್ನು ನಮಗೆ ಮಂಕು ಬೂದಿ ಎರಚಿದ್ದಳು. ಆದರೆ ಈಗ ಇಂದ್ರಾಣಿಯೇ ಆಕೆಯನ್ನು ಕೊಲೆ ಮಾಡಿರುವ ಸುದ್ದಿ ಕೇಳಿ ದಂಗಾಗಿ ಹೋಗಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ", ಎಂದು ಪೀಟರ್ ಹೇಳಿದ್ದಾರೆ.
 
ಇಂದ್ರಾಣಿಯ ಪುತ್ರ ಹಾಗೂ ಶೀನಾಳ ಸೋದರ ಮಿಖಿಲ್ ಬೋರಾ ತನಗೆ ಕೊಲೆಯ ಸ್ಪಷ್ಟ ಕಾರಣ ತಿಳಿದಿದೆ ಎಂದಿದ್ದಾನೆ. ಈಗ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದು ನಿಜವಾದ ಕಾರಣವಲ್ಲ. ನಾನು ಸತ್ಯವನ್ನು ಹೇಳಬಯಸುತ್ತೇನೆ ಎಂದಿದ್ದಾನಾತ.
 
ಇದು ಹಣದ ವ್ಯವಹಾರದ ಸಂಬಂಧ ನಡೆದ ಕೊಲೆ ಎಂದು ಸಹ ಕೆಲವು ಮೂಲಗಳು ಹೇಳುತ್ತಿದ್ದು ಸತ್ಯ ತನಿಖೆಯ ನಂತರವಷ್ಟೇ ಬಯಲಾಗಬೇಕಿದೆ.
 
ಶೀನಾ ಕೊಲೆಗೈಯಲ್ಲಲು ಸಹಾಯ ಮಾಡಿದ ಇಂದ್ರಾಣಿಯ ಮಾಜಿ ಪತಿ ಸಂಜೀವ್ ಖನ್ನಾನನ್ನು ಸಹ ಪೊಲೀಸರು ಬಂಧಿಸಿದ್ದು, ಶೀನಾಳ ಪ್ರೇಮಿ ಎನ್ನಲಾದ ಪೀಟರ್ ಮುಖರ್ಜಿ ಮಗ ರಾಹುಲ್‌ನನ್ನು ಸಹ ಇಂದು ವಿಚಾರಣೆಗೊಳಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ