ಬಿಹಾರ್ ಚುನಾವಣೆ ಫಲಿತಾಂಶ ಧಾರ್ಮಿಕ ಸಾಮರಸ್ಯತೆಗೆ ಸಾಕ್ಷಿ: ದಲೈಲಾಮಾ

ಭಾನುವಾರ, 15 ನವೆಂಬರ್ 2015 (17:14 IST)
ಬಿಹಾರ್ ವಿಧಾನಸಭೆ ಚುನಾವಣೆ ಫಲಿತಾಂಶ ಬಹುತೇಕ ಹಿಂದೂಗಳು ಧಾರ್ಮಿಕ ಸಾಮರಸ್ಯತೆಯನ್ನು ಬಯಸುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಟಿಬೆಟ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
 
ದಲೈಲಾಮಾ ಹೇಳಿಕೆಯನ್ನು ಜೆಡಿಯು-ಆರ್‌ಜೆಡಿ-ಕಾಂಗ್ರೆಸ್ ಪಕ್ಷಗಳ ಮುಖಂಡರು ಸ್ವಾಗತಿಸಿದ್ದು, ಪ್ರತ್ಯೇಕತಾವಾದಿ ಗುಂಪುಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿದೆ ಎಂದು ಆರೋಪಿಸಿದೆ.
 
ಟಿಬೆಟ್ ಧರ್ಮ ಗುರು ದಲೈ ಲಾಮಾ ದೀರ್ಘಾವಧಿಯವರೆಗೆ ಭಾರತದಲ್ಲಿರುವುದರಿಂದ ಭಾರತದ ಸಂಸ್ಕ್ರತಿಯನ್ನು ಅರಿತವರಾಗಿದ್ದರಿಂದ ಅವರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಪ್ರತ್ಯೇಕತಾವಾದಿಗಳಿಗೆ ಸೂಕ್ತ ಉತ್ತರವಾಗಿದೆ ಎಂದು ಜೆಡಿಯು ನಾಯಕ ಕೆ.ಸಿ ತ್ಯಾಗಿ ಹೇಳಿದ್ದಾರೆ.
 
ಏತನ್ಮಧ್ಯೆ, ಬಿಹಾರ್ ರಾಜ್ಯದಲ್ಲಿ ಶಾಂತಿ ಗೆದ್ದಿದೆ ಎನ್ನುವುದು ದಲೈಲಾಮಾ ಹೇಳಿಕೆಯಿಂದ ಸಾಬೀತಾಗಿದೆ ಎಂದು ಕಾಂಗ್ರೆಸ್ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ. 
 
ದಲೈಲಾಮಾ ಟಿಬೆಟ್‌ನ ಧಾರ್ಮಿಕ ಮತ್ತು ರಾಜಕೀಯ ನಾಯಕರು. ಅವರ ಹೇಳಿಕೆಯನ್ನು ಅರ್ಥೈಸಿಕೊಳ್ಳಬಹುದಾಗಿದೆ.ಬಿಹಾರ್ ರಾಜ್ಯದಲ್ಲಿ ಶಾಂತಿ, ಸಾಮರಸ್ಯತೆಗೆ ಗೆಲುವು ದೊರೆತಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಸಂದೀಪ್ ದಿಕ್ಷೀತ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ