ಡಾನ್ಸ್ ಬಾರ್‌ಗೆ ಲೈಸೆನ್ಸ್ ಕೊಡಿ: ಮಹಾ ಸರಕಾರಕ್ಕೆ ಸುಪ್ರೀಂ ಆದೇಶ

ಗುರುವಾರ, 26 ನವೆಂಬರ್ 2015 (21:13 IST)
ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್ ನೀಡಿದ ಮೊದಲಿನ ಆದೇಶವನ್ನು ಪಾಲಿಸಿ ಡಾನ್ಸ್ ಬಾರ್‌ಗಳನ್ನು ನಡೆಸಲು ಬಾರ್ ಮಾಲೀಕರಿಗೆ ಎರಡು ವಾರಗಳಲ್ಲಿ ಲೈಸೆನ್ಸ್ ನೀಡಬೇಕು ಎಂದು ಆದೇಶ ನೀಡಿದೆ. 
 
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ದೀಪಕ್ ಮಿಸ್ರಾ ಮತ್ತು ಪಿಸಿ.ಪಂಥ್ ನೇತೃತ್ವದ ನ್ಯಾಯಪೀಠ, ಕೋರ್ಟ್ ಆದೇಶವನ್ನು ಪಾಲಿಸದ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
 
ಮಹಾರಾಷ್ಟ್ರ ಸರಕಾರದ ಪರ ವಕೀಲರಾದ ಹರೀಶ್ ಸಾಳ್ವೆ ಮಾತನಾಡಿ, ಸುಪ್ರೀಂಕೋರ್ಟ್‌ನ ಯಾವುದೇ ಆದೇಶವನ್ನು ಪಾಲಿಸಲು ಸರಕಾರ ಬದ್ಧವಾಗಿದೆ ಎಂದರು.
 
ಮಹಾರಾಷ್ಟ್ರ ಸರಕಾರದ 2005ರ ಮುಂಬೈ ಪೊಲೀಸ್ ಕಾಯ್ದೆಯನ್ನು ಹೋಟೆಲ್ ಮತ್ತು ಬಾರ್ ಮಾಲೀಕರ ಸಂಘ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 
 
ಮುಂಬೈ ಹೈಕೋರ್ಟ್ ಏಪ್ರಿಲ್ 12, 2006 ರಂದು ಸರಕಾರ ನಿರ್ಧಾರವನ್ನು ಕಾನೂನುಬಾಹಿರ ಎಂದು ಘೋಷಿಸಿ, ಇದೊಂದು ಸಂವಿಧಾನ ವಿರೋಧಿ ಕೃತ್ಯ ಎಂದು ಕಿಡಿಕಾರಿತ್ತು.
 
ಮುಂಬೈ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸರಕಾರ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ವೆಬ್ದುನಿಯಾವನ್ನು ಓದಿ