ಕಾಶ್ಮಿರಿ ಬಜಾರ್ ವೇಶ್ಯಾವಾಟಿಕೆ ಕೇಂದ್ರದಿಂದ 21 ಯುವತಿಯರನ್ನು ಪಾರು ಮಾಡಿದ ಪೊಲೀಸ್

ಮಂಗಳವಾರ, 4 ಆಗಸ್ಟ್ 2015 (19:14 IST)
ಮುಂಬೈ ಪೊಲೀಸರು ರಹಸ್ಯ ಮತ್ತು ಅಪಾಯಕಾರಿ ಆಪರೇಶನ್ ಕೈಗೊಂಡು 21 ಬಾಲಕಿಯರನ್ನು ವೇಶ್ಯಾವಾಟಿಕೆ ಕೇಂದ್ರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
 
ಆಗ್ರಾದ ಭಯಾನಕ ರೆಡ್‌ಲೈಟ್ ವೇಶ್ಯಾವಾಟಿಕೆ ಕೇಂದ್ರವಾದ ಕಾಶ್ಮಿರಿ ಬಜಾರ್‌ನಿಂದ 21 ಬಾಲಕಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಐವರು ಯುವತಿಯರು ಮಹಾರಾಷ್ಟ್ರ ರಾಜ್ಯಕ್ಕೆ ಸೇರಿದವರಾಗಿದ್ದು ಉಳಿದವರು ಉತ್ತರಭಾರತಕ್ಕೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಎಲ್ಲಾ ಬಾಲಕಿಯರು 11 ರಿಂದ 14ವರ್ಷದವರಾಗಿದ್ದು ಅಪಹರಣಗೊಂಡವರು ಅಥವಾ ಏಜೆಂಟ್‌ಗಳ ಆಮಿಷಕ್ಕೆ ಬಲಿಯಾದವರಾಗಿದ್ದಾರೆ.ಒಬ್ಬೊಬ್ಬರನ್ನು 2 ರಿಂದ 3 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಕಳೆದ 2007ರಲ್ಲಿ ವೇಶ್ಯಾವಾಟಿಕೆ ಸೇರಿದ್ದ ಬಾಲಕಿ ತನ್ನ ಬಳಿ ಬಂದ ಗ್ರಾಹಕನೊಬ್ಬನಿಗೆ, ನವಿ ಮುಂಬೈನಲ್ಲಿರುವ ತನ್ನ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುವಂತೆ ಮತ್ತೆ ತನ್ನನ್ನು ಇಲ್ಲಿಂದ ಪಾರು ಮಾಡುವಂತೆ ಮನವಿ ಮಾಡಿದ್ದಾಳೆ.  
 
ಗ್ರಾಹಕ ತನ್ನ ಜೊತೆಗೆ ಐವರು ಸಹಚರರನ್ನು ಕರೆದುಕೊಂಡು ಆಗ್ರಾದ ಕಾಶ್ಮಿರಿ ಬಜಾರ್‌ಗೆ ಬಂದು ಬಾಲಕಿಯನ್ನು ಅಲ್ಲಿದ ಪಾರು ಮಾಡು ವಲ್ಲಿ ಯಶಸ್ವಿಯಾಗಿದ್ದಾನೆ.
 
ಬಾಲಕಿ ಮುಂಬೈನಲ್ಲಿರುವ ಪೊಲೀಸ್ ಠಾಣೆಗೆ ತೆರಳಿ ಆಗ್ರಾದಲ್ಲಿರುವ 22 ಕೋಠಾಗಳಲ್ಲಿ ಮಹಾರಾಷ್ಟ್ರದ ಅನೇಕ ಬಾಲಕಿಯರಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ತಿಳಿಸಿದ್ದಾಳೆ.
 
ಬಾಲಕಿಯಿಂದ ಸಂಪೂರ್ಣ ಮಾಹಿತಿ ಪಡೆದ ಪೊಲೀಸರು ವೇಶ್ಯಾವಾಟಿಕೆ ಕೇಂದ್ರಗಳ ಮೇಲೆ ದಾಳಿ ಮಾಡಿ 21 ಬಾಲಕಿಯರನ್ನು ರಕ್ಷಿಸಿ ಕರ್ತವ್ಯನಿಷ್ಛೆ ಮೆರೆದಿದ್ದಾರೆ.

ವೆಬ್ದುನಿಯಾವನ್ನು ಓದಿ