ಹುತಾತ್ಮ ಸೇನಾಧಿಕಾರಿಗೆ ಅಂತಿಮ ನಮನ

ಬುಧವಾರ, 28 ಜನವರಿ 2015 (11:46 IST)
ಸೋಮವಾರ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿ ಮಂಗಳವಾರ ಉಗ್ರರ ಗುಂಡೇಟಿಗೆ ಬಲಿಯಾದ  ಸೇನಾಧಿಕಾರಿಗೆ ಶ್ರೀನಗರದಲ್ಲಿ ಸಕಲ ಸೈನಿಕ ಸನ್ಮಾನ ನೀಡಲಾಯಿತು.
 
ಶ್ರೀನಗರದಲ್ಲಿರುವ ಮಿಲಿಟರಿ ಮುಖ್ಯಕಚೇರಿಯಲ್ಲಿ ಹುತಾತ್ಮ ರಾವ್ ಮತ್ತು ಪೊಲೀಸ್ ಹೆಡ್ ಕಾನ್ಸಟೇಬಲ್ ಸಂಜೀವ್ ಸಿಂಗ್ ಅವರಿಗೆ ಗೌರವ ವಂದನೆ ಸಲ್ಲಿಸಿ ಮೃತ ದೇಹಗಳನ್ನು ಹುಟ್ಟೂರಿಗೆ ರವಾನಿಸಲಾಯಿತು. 
 
ಅಮೇರಿಕ ಅಧ್ಯಕ್ಷ ಭಾರತದಿಂದ ನಿಗರ್ಮಿಸಿದ ಬೆನ್ನಲ್ಲೇ ಕಾಶ್ಮೀರ ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ನಡೆದ ಗುಂಡಿನ ಚಕಮಕಿಯಲ್ಲಿ ಸೇನಾ ಕಮಾಂಡಿಗ್ ಅಧಿಕಾರಿ, ಕರ್ನಲ್ ಮುನೀಂದ್ರನಾಥ್ ರಾಯ್ ಮತ್ತು ಸಂಜೀವ್ ಸಿಂಗ್ ಹುತಾತ್ಮರಾಗಿದ್ದರು. 
 
ಪುಲ್ವಾಮಾದ ಮಿಂದೋರಾ ಎಂಬ ಗ್ರಾಮದಲ್ಲಿ ಏಕಾಯೇಕಿ ಉಗ್ರರು ದಾಳಿ ನಡೆಸಿದಾಗ ಅವರನ್ನು ಹಿಮ್ಮೆಟ್ಟಿಸಲು ನಿಂತ ಸೇನಾ ಪಡೆ ಇಬ್ಬರನ್ನು ಹೊಡೆದುರುಳಿಸಿತು. ಆದರೆ ಕರ್ನಲ್ ಮತ್ತು ಒಬ್ಬ ಪೊಲೀಸ್ ಉಗ್ರರ ಗುಂಡಿಗೆ ಬಲಿಯಾದರು. 
 
ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವ ಮುನೀಂದ್ರನಾಥ್ ರಾಯ್ ಅವರಿಗೆ ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಜತೆ ವೀರಾವೇಶದಿಂದ ಹೋರಾಡಿದ್ದಕ್ಕಾಗಿ ಸೋಮವಾರ ಶೌರ್ಯ ಪ್ರಶಸ್ತಿಯಿಂದ ಸನ್ಮಾನಿಸಲಾಗಿತ್ತು. 

ವೆಬ್ದುನಿಯಾವನ್ನು ಓದಿ