Xi ('ಕ್ಸಿ) ಯನ್ನು ಇಲೆವನ್ ಎಂದು ಓದಿದ್ದಕ್ಕೆ ಕೆಲಸ ಕಳೆದಕೊಂಡ ನಿರೂಪಕ

ಶುಕ್ರವಾರ, 19 ಸೆಪ್ಟಂಬರ್ 2014 (15:20 IST)
ತಡ ರಾತ್ರಿ ಸುದ್ದಿ ಓದುತ್ತಿದ್ದ ಸಂದರ್ಭದಲ್ಲಿ ಚೀನಾದ ಅಧ್ಯಕ್ಷ ಕ್ಸಿ( Xi) ಜಿನ್‌ಪಿಂಗ್ ಹೆಸರನ್ನು ಇಲೆವನ್ ( 11) ಜಿನಪಿಂಗ್ ಎಂದು ತಪ್ಪಾಗಿ ಓದಿದ ಕಾರಣಕ್ಕೆ ರಾಷ್ಟ್ರೀಯ ಸುದ್ದಿವಾಹಿನಿಯೊಂದರಲ್ಲಿ ನಿರೂಪಕನಾಗಿ ಕೆಲಸ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೆಲಸವನ್ನು  ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. 

ಕ್ಯಾಶುಯಲ್ ವಾರ್ತಾವಾಚಕನಾಗಿದ್ದ ಆತ ಚೀನಾದ ಅಧ್ಯಕ್ಷನ ಹೆಸರನ್ನು  ರೋಮನ್ ಸಂಖ್ಯೆ ಇಲೆವನ್ ಎಂದು ತಪ್ಪಾಗಿ ಓದಿದ್ದು ಆತನ ಕೆಲಸಕ್ಕೆ ಕಂಟಕ ತಂದೊಡ್ಡಿತು.
 
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಸಾರ ಭಾರತಿ ಮುಖ್ಯ ಜವಾಹರ್ ಸರ್ಕಾರ್, "ಇದು ಸತ್ಯ . ತಪ್ಪು ಓದಿದ ವಾರ್ತಾ ವಾಚಕನನ್ನು ನಾವು ಕೆಲಸದಿಂದ ವಜಾ ಮಾಡಿದ್ದೇವೆ. ಭವಿಷ್ಯದಲ್ಲಿ ಇಂತಹದ್ದು ಮರುಕಳಿಸಬಾರದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಂಡಿದ್ದೇವೆ" ಎಂದಿದ್ದಾರೆ. 
 
ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿನಿಯಲ್ಲಿ ತಡರಾತ್ರಿ ಸುದ್ದಿಗಳನ್ನು ಸಾಮಾನ್ಯವಾಗಿ ಕಾಂಟ್ರಾಕ್ಟ್ ಮೇಲೆ ಕೆಲಸ ಮಾಡುವ ಕ್ಯಾಶುಯಲ್ ವಾರ್ತಾವಾಚಕರು ಓದುತ್ತಾರೆ.

ವೆಬ್ದುನಿಯಾವನ್ನು ಓದಿ