ವಿದ್ಯಾರ್ಥಿಗಳ ಫೇಸ್‌‌‌ಬುಕ್ ಅಕೌಂಟ್‌‌ ಬಂದ್ ಮಾಡಿಸಿದ ಗುರ್ಗಾಂವ್ ಪೋಲಿಸರು

ಗುರುವಾರ, 28 ಆಗಸ್ಟ್ 2014 (19:38 IST)
ಸೈಬರ್‌ ಸಿಟಿ ಪೋಲಿಸರು ಸೈಬರ್‌ ಸೇಫ್ಟಿ ಅಭಿಯಾನದಲ್ಲಿ 10ನೇ ತರಗತಿವರೆಗಿನ ಬಾಲಕರ ಫೇಸ್‌‌ಬುಕ್‌ ಅಕೌಂಟ್‌ ಬಂದ್ ಮಾಡಲು ಪ್ರಾರಂಭಿಸಿದ್ದಾರೆ. ಇರಲ್ಲಿ ನಗರದ 23 ಶಾಲೆಗಳು ಕೂಡ ಪೋಲಿಸರ ಜೊತೆಗಿವೆ. ಇವರ ಪ್ರಕಾರ, ಮಕ್ಕಳು ಫೇಸ್‌ಬುಕ್‌‌ನಲ್ಲಿ ನಿರತರಾಗಿರುವುದರಿಂದ ಅಧ್ಯಯನದ ಕಡೆಗೆ ಗಮನ ನೀಡುತ್ತಿಲ್ಲ. 6 ದಿನಗಳಲ್ಲಿ 1200ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಫೇಸ್‌‌ಬುಕ್‌ ಅಕೌಂಟ್‌ ಡಿಆಕ್ಟಿವೇಟ್‌ ಮಾಡಿದ್ದಾರೆ. 
 
ಈ ಅಧ್ಯಯನದ ಹಿಂದೆ ಸೈಬರ್‌ ಸೇಫ್‌‌‌ ಅಭಿಯಾನದ ವತಿಯಿಂದ ಮಾಡಲಾದ ಸಮೀಕ್ಷೆ ಕೂಡ ಇದೆ. ದೆಹಲಿಯ ಖಾಸಗಿ ಕಂಪೆನಿಯೊಂದು 12 ಶಾಲೆಯ ಸುಮಾರು 1000 ಬಾಲಕರನ್ನು ಇದರಲ್ಲಿ ಭಾಗಿಯಾಗಿಸಿಕೊಂಡಿದೆ. ಫೇಸ್‌‌ಬುಕ್‌ ಮತ್ತು ಇತರ ಸೈಟ್‌‌‌ಗಳ ಅಕೌಂಟ್‌ ಹೊಂದಿರದ ಮಕ್ಕಳಿಗಿಂತ ಈ ಎಲ್ಲಾ ಅಕೌಂಟ್‌ ಹೊಂದಿರುವ ಮಕ್ಕಳ ಅಂಕಗಳು ಶೇ.15-20 ರಷ್ಟು ಕಡಿಮೆ ಇವೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ. 
 
ಈ ಅಭಿಯಾನದಲ್ಲಿ ಡಿಎಲ್‌‌ಎಫ್‌‌, ಸುಶಾಂತ್‌ ಲೋಕ್‌, ಸೊಹನಾ ರೋಡ್‌, ಸೆಕ್ಟರ್‌ 56, ಸೆಕ್ಟರ್ 43, ಒಲ್ಡ್‌ ಗುರ್ಗಾಂವ್‌ನ  ಡಿಸಿಎಸ್‌‌, ಲೊಟಸ್‌‌ ವೈಲಿ, ಅಜಂತಾ ಪಬ್ಲಿಕ್‌ ಸ್ಕೂಲ್‌, ಶಿವ ನಾಡರ್‌, ಶ್ರೀರಾಮ್‌, ಬ್ಲ್ಯೂಬೆಲ್ಸ, ಸಿಸಿಎ ನಂತಹ ಸುಮಾರು 23 ಶಾಲೆಗಳು ಪೋಲಿಸರ ಹತ್ತಿರವಿವೆ.
 
ಮಕ್ಕಳನ್ನು ಫೇಸ್‌ಬುಕ್‌ ಅಕೌಂಟ್‌ನಿಂದ ದೂರ ಇರುವಂತೆ ಆದೇಶ ನೀಡಲಾಗಿದೆ ಎಂದು ಶಾಲೆಯ ಪ್ರಿನ್ಸಿಪಾಲರು ತಿಳಿಸಿದ್ದಾರೆ. ಕುಟುಂಬದವರಿಗೂ ಕೂಡ, ಮಕ್ಕಳ ಈ ತರಹದ ಅಕೌಂಟ್‌ ಲಭಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ತಿಳಿಸಲಾಗಿದೆ. ಕುಟುಂಬದವರನ್ನು ಸೇರಿಸಿಕೊಂಡು ಒಂದು ಸಮಿತಿ ಮಾಡಬೇಕು. ಇದರಿಂದ ಅವರೂ ಕೂಡ ಜಾಗರೂಕರಾಗುತ್ತಾರೆ ಎಂದು ಗುರ್ಗಾಂವ್ ಅಭಿಭಾವಕ್‌ ಸಂಘದ ಅಧ್ಯಕ್ಷ ವಶಿಷ್ಠ ಗೋಯಲ್‌ ತಿಳಿಸಿದ್ದಾರೆ. 
 
'ಸಾಮಾಜೀಕ ಜಾಲ ತಾಣಗಳ ಅವಶ್ಯಕತೆ ಇದೆ. ಆದರ, ಮಕ್ಕಳು ಹಲವು ಬಾರಿ ಇದರಿಂದ ತಪ್ಪು ಕೆಲಸ ಮಾಡುತ್ತಾರೆ. ಅವರಿಗೆ ತಿಳಿಹೇಳುವುದು ಅವಶ್ಯಕವಿದೆ. ಇದಕ್ಕಾಗಿ ಈ ಆಭಿಯಾನ ಪ್ರಾರಂಭ ಮಾಡಲಾಗಿದೆ' ಎಂದು ಪೋಲಿಸ್‌ ಆಯುಕ್ತ ಅಲೋಕ್‌ ಮಿತಲ್‌ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ