ಸತ್ತ ಆಪ್ ಕಾರ್ಯಕರ್ತ ಚಂದ್ರಮೋಹನ್ ಶರ್ಮಾ ಬೆಂಗಳೂರಿನಲ್ಲಿ ಜೀವಂತ...

ಬುಧವಾರ, 27 ಆಗಸ್ಟ್ 2014 (13:11 IST)
ಕಳೆದ 3 ತಿಂಗಳುಗಳ ಹಿಂದೆ  ಗ್ರೇಟರ್ ನೋಯ್ಡಾದಲ್ಲಿ ತಮ್ಮ ಕಾರಿನಲ್ಲಿ ಜೀವಂತವಾಗಿ ದಹಿಸಲ್ಪಟ್ಟಿದ್ದಾರೆ ಎಂದುಕೊಳ್ಳಲಾಗಿದ್ದ  ಆಪ್ ಪಕ್ಷದ ಸದಸ್ಯ ಚಂದ್ರಮೋಹನ್ ಶರ್ಮಾರವರನ್ನು ಬೆಂಗಳೂರಿನಲ್ಲಿ ಜೀವಂತವಾಗಿ ಸೆರೆ ಹಿಡಿಯಲಾಗಿದೆ. 

ಮಾಹಿತಿ ಹಕ್ಕು ಹೋರಾಟಗಾರ ಚಂದ್ರಮೋಹನ್ ಅವರನ್ನು ಸಿಲಿಕಾನ್ ಸಿಟಿಯಲ್ಲಿ ಬಂಧಿಸಲಾಗಿದೆ ಎಂದು ದೂರದರ್ಶನದ ವರದಿಗಳು ಹೇಳುತ್ತಿವೆ. 
 
ಶರ್ಮಾ ಮೇಲೆ ತಾನು ಸತ್ತಿದ್ದೇನೆ ಎಂದು ಬಿಂಬಿಸುವ ನಕಲಿ ಸನ್ನಿವೇಶವನ್ನು ಸೃಷ್ಟಿಸಿದ ಆರೋಪವಿದೆ. ಆಪ್ ಸದಸ್ಯ ನೇಪಾಳದಲ್ಲಿ ಇದ್ದಾರೆ ಎಂದು ಪೋಲಿಸರಿಗೆ ಮಾಹಿತಿ ಬಂದಿತ್ತು ಮತ್ತು ಅವರು ಬೆಂಗಳೂರಿನಲ್ಲಿರುವ ಬಗ್ಗೆ ಕುರುಹು ಕೂಡ ಲಭಿಸಿತ್ತು. ಆ ಕಾರಣ  ಕರ್ನಾಟಕ, ನೇಪಾಳ ಮತ್ತು ಗಡಿ ಪ್ರದೇಶಗಳಲ್ಲಿ ಪೋಲಿಸ್ ತಂಡ ಕಾರ್ಯತತ್ಪರವಾಯಿತು. 
 
ವರದಿಯೊಂದರ ಪ್ರಕಾರ  ಶರ್ಮಾ ಮಹಿಳೆಯೊಬ್ಬಳ ಜತೆ ವಾಸಿಸುತ್ತಿದ್ದಾರೆ ಎಂದು ಅವರ ಪತ್ನಿ ಸವಿತಾ ಆಪಾದಿಸಿದ್ದಾರಲ್ಲದೇ ತಮ್ಮ ಗಂಡ ತಾನು ಸತ್ತಿದ್ದೇನೆ ಎಂಬ ನಕಲಿ ಸನ್ನಿವೇಶವನ್ನು ರೂಪಿಸಿದರು ಎಂದು ಆಕೆ ಕೂಡ ಹೇಳುತ್ತಾರೆ. 
 
ಜೀವಂತ ದಹಿಸಲ್ಪಟ್ಟ ದೇಹ ಬೇರೆ ವ್ಯಕ್ತಿಯದಾಗಿದ್ದು ಈಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ ಎಂದು ಪೋಲಿಸರು  ತಿಳಿಸಿದ್ದಾರೆ.
 
ಶರ್ಮಾರನ್ನು ಮೊಬೈಲ್ ಟ್ರ್ಯಾಕರ್ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಅವರ ಪತ್ನಿ ಸವಿತಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ