ಸಿಯಾಚಿನ್‌ನಿಂದ ಸೇನೆ ಹಿಂಪಡೆಯುವ ಯೋಚನೆಯಿಲ್ಲ: ಪರಿಕ್ಕರ್

ಭಾನುವಾರ, 7 ಫೆಬ್ರವರಿ 2016 (17:11 IST)
ಸಿಯಾಚಿನ್ ಹಿಮಪಾತದಲ್ಲಿ ಇತ್ತೀಚೆಗೆ 10 ಯೋಧರು ಮರಣವನ್ನಪ್ಪಿರುವುದು ತುಂಬಾ ನೋವಿನ ಸಂಗತಿ. ಆದರೆ, ಸಿಯಾಚಿನ್‌ನಿಂದ ಸೇನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. 
 
ಘಟನೆಯ ಬಗ್ಗೆ ಸಂಪೂರ್ಣ ಭಾರತ ದೇಶವೇ ನೋವನುಭವಿಸಿದೆ. ಆದರೆ, ಸೇನೆಯನ್ನು ಹಿಂಪಡೆಯಲಾಗದು ಎಂದು ಸ್ಪಷ್ಟಪಡಿಸಿದ್ದಾರೆ.
 
ದೇಶದ ಭದ್ರತೆಯ ಹಿತದೃಷ್ಟಿಯಿಂದ ಸಿಯಾಚಿನ್‌ನಲ್ಲಿ ಸೇನೆ ನಿಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಿಯಾಚಿನ್ ಹಿಮಪಾತದಂತಹ ಘಟನೆಗಳಲ್ಲಿ ಇಳಿಮುಖವಾಗಿದೆ ಎಂದು ತಿಳಿಸಿದ್ದಾರೆ.
 
ಸಿಯಾಚಿನ್ ನಿಯಂತ್ರಣ ಪಡೆಯಲು ಸಾವಿರಾರು ಯೋಧರು ಹುತಾತ್ಮರಾಗಿದ್ದಾರೆ. ಸಿಯಾಚಿನ್‌ನಿಂದ ಸೇನೆ ಹಿಂಪಡೆದಲ್ಲಿ ವಿಚ್ಚಿದ್ರಕಾರಿ ಶಕ್ತಿಗಳು ಅದರ ಸದುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ