ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಮಾಂತ್ರಿಕನ ಬಂಧನ

ಭಾನುವಾರ, 7 ಫೆಬ್ರವರಿ 2016 (13:50 IST)
ಕೌಟಂಬಿಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಮಹಿಳೆಯನ್ನು ನಂಬಿಸಿ ಅತ್ಯಾಚಾರವೆಸಗಿದ್ದಲ್ಲದೇ 35 ಸಾವಿರ ರೂಪಾಯಿಗಳನ್ನು ವಂಚಿಸಿದ 44 ವರ್ಷ ವಯಸ್ಸಿನ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ.
 
ಆರೋಪಿ ಮಾಂತ್ರಿಕ ಸಂಜಯ್ ಕುಮಾರ್ ದೆಹಲಿಯ ಅಂಬೇಡ್ಕರ್ ನಗರ ಪ್ರದೇಶದ ವಾಸಿಯಾಗಿದ್ದು,ವಿವಾಹಿತನಾಗಿದ್ದು ನಾಲ್ಕು ಮಕ್ಕಳ ತಂದೆಯಾಗಿದ್ದಾನೆ ಎಂದು ಡಿಸಿಪಿ ಪರಮಾದಿತ್ಯ ತಿಳಿಸಿದ್ದಾರೆ.
 
ಪೊಲೀಸ್ ಮೂಲಗಳ ಪ್ರಕಾರ, ಸೆಂಟ್ರಲ್ ದೆಹಲಿ ನಿವಾಸಿಯಾದ ಮಹಿಳೆ ಪತಿಯೊಂದಿಗೆ ವಿರಸ ಹೊಂದಿದ್ದು ಕೌಟಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಳು. ಕೌಟಂಬಿಕ ಸಮಸ್ಯೆ ನಿವಾರಿಸಲು ಮಾಂತ್ರಿಕನ ಮೊರೆಹೋಗಿದ್ದಳು ಎಂದು ತಿಳಿಸಿದ್ದಾರೆ.
 
ಮಹಿಳೆಯ ಮುಗ್ದತೆಯನ್ನು ದುರುಪಯೋಗಪಡಿಸಿಕೊಂಡ ಮಾಂತ್ರಿಕ ಆಕೆಗೆ ಮತ್ತುಬರಿಸುವ ಔಷಧಿ ನೀಡಿ ಅತ್ಯಾಚಾರವೆಸಗಿದ್ದ. ಪ್ರಜ್ಞೆ ಮರಳಿದ ನಂತರ ಮಹಿಳೆಗೆ ತನ್ನ ಮೇಲೆ ಅತ್ಯಾಚಾರವಾಗಿರುವುದು ಗೊತ್ತಾಗಿದೆ.
 
ಕೌಟಂಬಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮಹಿಳೆಯನ್ನು ನಂಬಿಸಿ 35000 ರೂಪಾಯಿಗಳನ್ನು ಪಡೆದು ಪರಾರಿಯಾಗಿದ್ದ.  
 
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಸಂಜಯ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ