ಬಿಜೆಪಿಯಿಂದ ಅಣ್ಣಾ ಹಜಾರೆ ಕೊಲೆ: ಅರವಿಂದ್ ಕೇಜ್ರಿವಾಲ್

ಶುಕ್ರವಾರ, 30 ಜನವರಿ 2015 (16:29 IST)
ಪ್ರಮುಖ ವೃತ್ತಪತ್ರಿಕೆಯೊಂದರಲ್ಲಿ ಬಿಜೆಪಿ ಪ್ರಕಟಿಸಿರುವ ಒಂದು ಜಾಹೀರಾತಿಗೆ ಸಂಬಂಧಿಸಿದಂತೆ  ಆಪ್ ನಾಯಕ ಕೇಜ್ರಿವಾಲ್ ಬಹಳ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 
 
ಜಾಹೀರಾತಿನಲ್ಲಿ ಅಣ್ಣಾ ಹಜಾರೆಯವರ ಭಾವಚಿತ್ರಕ್ಕೆ ಮಾಲೆ ಧರಿಸಿದಂತೆ ತೋರಿಸಲಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಸತ್ತು ಹೋಗಿರುವ ವ್ಯಕ್ತಿಯ ಭಾವಚಿತ್ರಕ್ಕೆ ಮಾತ್ರ ಮಾಲೆಯನ್ನು ಹಾಕಲಾಗುತ್ತದೆ. 
 
ಆದ್ದರಿಂದ ಬಿಜೆಪಿಗೆ ಛಾಟಿ ಏಟು ಬೀಸಲು ಈ ಜಾಹೀರಾತನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಕೇಜ್ರಿವಾಲ್ ಬಿಜೆಪಿ ಈ ಜಾಹೀರಾತಿನ ಮೂಲಕ ಅಣ್ಣಾ ಹಜಾರೆಯವರನ್ನು ಸಾಯಿಸಿದೆ. ತನ್ನ ಈ ದೊಡ್ಡ ತಪ್ಪಿಗಾಗಿ ಪಕ್ಷ  ಕ್ಷಮೆಯಾಚಿಸಬೇಕು ಎಂದು  ಆಗ್ರಹಿಸಿದ್ದಾರೆ. ಬಿಜೆಪಿಯ ಕೃತ್ಯವನ್ನು ಅವರು ನಾಥೂರಾಮ್ ಗೋಡ್ಸೆ ಮಾಡಿದ ಗಾಂಧಿ ಹತ್ಯೆಗೆ ಹೋಲಿಸಿದ್ದಾರೆ. 
 
ಈ ಜಾಹೀರಾತು ಅತಿ ಕಳಪೆ ಗುಣಮಟ್ಟದ್ದಾಗಿದ್ದು ಇದು ಬಿಜೆಪಿ ಚುನಾವಣಾ ಗೆಲುವಿಗೆ ಸಂಬಂಧಿಸಿದಂತೆ ಆತಂಕಿತವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಆಪ್ ಕಿಚಾಯಿಸಿದೆ. 
 
ನಾವು ಧನಾತ್ಮಕ ಕಾರ್ಯಸೂಚಿಯ ಬಗ್ಗೆ ಮಾತನಾಡುತ್ತಿದ್ದರೆ, ಬಿಜೆಪಿ ವೈಯಕ್ತಿಕ  ದಾಳಿ ಮಾಡುವುದರಲ್ಲಿ ಮುಳುಗಿ ಹೋಗಿದೆ. ಅವರ ಬಳಿ ದೆಹಲಿ ಅಭಿವೃದ್ಧಿಯ ಕಲ್ಪನೆಯ ಕಾರ್ಯಸೂಚಿಯೇ ಇಲ್ಲ ಎಂದು ಆಪ್ ಹಿರಿಯ ನಾಯಕರು ಆರೋಪಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ