ಶೇಮ್ ಶೇಮ್ ದೆಹಲಿ: ಚಲಿಸುವ ಕಾರಿನಲ್ಲಿ ಮಹಿಳೆಯ ಅತ್ಯಾಚಾರ

ಬುಧವಾರ, 24 ಫೆಬ್ರವರಿ 2016 (15:31 IST)
ದೆಹಲಿಯಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿಯಾಗಿ ಚಲಿಸುವ ಕಾರಿನಲ್ಲಿ 26 ವರ್ಷದ ಯುವತಿಯ ಮೇಲೆ ಮೂವರು ಕಾಮುಕರು ಅತ್ಯಾಚಾರ ಎಸಗಿದ ಹೇಯ ಘಟನೆ ಮೆಹ್ರೌಲಿ- ಗುರ್ಗಾಂವ್ ರಸ್ತೆಯಲ್ಲಿ ನಡೆದಿದೆ. 
 
ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ದಕ್ಷಿಣ ದೆಹಲಿಯ ಮುನಿರ್ಕಾ ನಿವಾಸಿಯಾದ ಯುವತಿ ಎಮ್‌ಜಿ ಮಾಲ್‌ನಿಂದ ಶಾಪಿಂಗ್ ನಡೆಸಿ ಆರೋ ರಿಕ್ಷಾದಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಮೂವರು ಯುವಕರು ಆಕೆಯನ್ನು ಆಟೋದಿಂದ ಹೊರಕ್ಕೆಳೆದು ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದಾರೆ. ಆ ಕಾರಿನಲ್ಲಿ ಮತ್ತೊಬ್ಬ ಮಹಿಳೆ ಕೂಡ ಇದ್ದಳೆಂಬುದು ಗಮನಾರ್ಹ ಸಂಗತಿ. 
 
ಬಳಿಕ ಆಕೆಯ ಮೇಲೆ ಅತ್ಯಾಚಾರ ಎಸಗಿದ ದುಷ್ಟರು ಬಳಿಕ ಆಕೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದಾರೆ. ಸೋಮವಾರ ಮುಂಜಾನೆ ಪೊಲೀಸ್ ಠಾಣೆಗೆ ಹೋದ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾಳೆ. 
 
ಆರೋಪಿಗಳು ತನಗೆ ಅಪರಿಚಿತರಾಗಿದ್ದು ಕಾರ್ ನಂಬರ್ ಗುರುತಿಸಿಕೊಳ್ಳಲು ಸಹ ನಾನು ಸಫಲಳಾಗಲಿಲ್ಲ ಎಂದು ಆಕೆ ಪೊಲೀಸರಲ್ಲಿ ಹೇಳಿದ್ದಾಳೆ. 
 

ವೆಬ್ದುನಿಯಾವನ್ನು ಓದಿ