ಅರವಿಂದ್ ಕೇಜ್ರಿವಾಲ್‌‌ರೊಂದಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಮಾಲೋಚನೆ

ಶುಕ್ರವಾರ, 31 ಜುಲೈ 2015 (17:09 IST)
ಆಪ್ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ನಡೆಯುತ್ತಿರುವ ರಾಜಕೀಯ ಹಣಾಹಣಿಯ ನಡುವೆ ವಿವಿಧ ವಿಷಯಗಳನ್ನು ಚರ್ಚಿಸಲು ರಾಷ್ಟ್ರಪತಿ ಪ್ರಣವ್ ಮುಖರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ನಿವಾಸಕ್ಕೆ ಆಹ್ವಾನಿಸಿದ್ದರು. 

ಅಧಿಕೃತ ಮೂಲಗಳ ಪ್ರಕಾರ, ಗಂಟೆಗಳ ಕಾಲ ನಡೆದ ಸಭೆಯಲ್ಲಿ ದೆಹಲಿಯ ಸದ್ಯದ ಪರಿಸ್ಥಿತಿಯ ಬಗ್ಗೆ ಕೇಜ್ರಿವಾಲ್ ಮುಖರ್ಜಿಯವರಿಗೆ ಮನದಟ್ಟು ಮಾಡಿದರು. 
 
ಲೆಫ್ಟಿನೆಂಟ್ ಗವರ್ನರ್ ನಜೀಬ್  ಜಂಗ್ ಅಥವಾ ಕೇಂದ್ರ ಸರ್ಕಾರದ ಜತೆಗಿನ ಜಟಾಪಟಿಗೆ ಸಂಬಂಧಿಸಿದಂತೆ ಮಾತನಾಡಲು ನಡೆಸಿದ ಸಭೆ ಎಂಬುದನ್ನು ತಳ್ಳಿ ಹಾಕಿರುವ ಸರಕಾರದ ವಕ್ತಾರರು ಇದು ಸೌಜನ್ಯಕ್ಕಾಗಿ ನಡೆದ ಸಭೆ ಎಂದು ಹೇಳಿದ್ದಾರೆ. 
 
ಆಪ್ ಸರ್ಕಾರ ಮತ್ತು ಜಂಗ್, ಭ್ರಷ್ಟಾಚಾರ ವಿರೋಧಿ ಶಾಖೆ (ಎಸಿಬಿ) ಕಾರ್ಯನಿರ್ವಹಣೆಯ ಕುರಿತಂತೆ ಮತ್ತು  ಹಿರಿಯ ಅಧಿಕಾರಿಗಳು ನೇಮಕಾತಿಗಳಿಗೆ ಸಂಬಂಧಿಸಿದಂತೆ ಜಂಗಿ ಕುಸ್ತಿಯಲ್ಲಿ ತೊಡಗಿವೆ. 
 
ಕಳೆದ  ತಿಂಗಳು ಸಹ ಕೇಜ್ರಿವಾಲ್ ಮತ್ತು ನಜೀಬ್ ಜಂಗ್, ಪ್ರಣಬ್ ಮುಖರ್ಜಿಯವರನ್ನು ಭೇಟಿಯಾಗಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ವಿವರಿಸಿದ್ದರು. 

ವೆಬ್ದುನಿಯಾವನ್ನು ಓದಿ