ವ್ಯಾಟ್ ತೆರಿಗೆಯನ್ನು ಶೇ.20 ರಿಂದ ಶೇ.30ಕ್ಕೆ ಏರಿಸಿದ ದೆಹಲಿ ಸರಕಾರ

ಮಂಗಳವಾರ, 30 ಜೂನ್ 2015 (19:07 IST)
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ವ್ಯಾಟ್ ತೆರಿಗೆಯನ್ನು ಶೇ 20 ರಿಂದ ಶೇ. 30ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿದೆ.
 
ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರದ ವ್ಯಾಟ್ ತೆರಿಗೆ ಹೆಚ್ಚಳದಿಂದಾಗಿ ಪೆಟ್ರೋಲ್ ದರ, ಅಡುಗೆ ಅನಿಲ, ಸಿಎನ್‌ಜಿ ಮತ್ತು ಮದ್ಯದ ದರಗಳು ಏರಿಕೆಯಾಗಲಿವೆ.
 
ಕಳೆದ ಏಪ್ರಿಲ್ 25 ರಂದು ಮಂಡಿಸದ ಬಜೆಟ್ ಸಂದರ್ಭದಲ್ಲಿ ಕೆಲ ವಸ್ತುಗಳ ಮೇಲಿರುವ ವ್ಯಾಟ್ ತೆರಿಗೆಯನ್ನು ಇಳಿಸಲು ಸರಕಾರ ನಿರ್ಧರಿಸಿದೆ ಎಂದು ಆಪ್ ಸರಕಾರ ಭರವಸೆ ನೀಡಿತ್ತು. 
 
ದೆಹಲಿ ವಿಧಾನಸಭೆಯಲ್ಲಿ ವ್ಯಾಟ್ ಮಸೂದೆಗೆ ಅಂಗೀಕಾರ ದೊರೆಯುತ್ತಿದ್ದಂತೆ ಬಿಜೆಪಿ ಶಾಸಕ ಮಸೂದೆಯ ದಾಖಲೆಗಳನ್ನು ಹರಿದು ಹಾಕಿದರೆ ಮತ್ತೊಬ್ಬ ಶಾಸಕ ಒ.ಪಿ.ಶರ್ಮಾ ಮೈಕ್ ಮುರಿದು ಬಿಸಾಕಿದ ಘಟನೆ ನಡೆಯಿತು. 
 
ವ್ಯಾಟ್ ದರ ಹೆಚ್ಚಳ ಕುರಿತಂತೆ ಸಮರ್ಥಿಸಿಕೊಂಡ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಸರಕಾರದ ಆರ್ಥಿಕ ಹೊರೆಯನ್ನು ಇಳಿಸುವ ಏಕೈಕ ದೃಷ್ಟಿಯಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
 

ವೆಬ್ದುನಿಯಾವನ್ನು ಓದಿ