ಜನಲೋಕಪಾಲ್ ಮಸೂದೆ: ಹಜಾರೆ ಸಲಹೆಗಳಿಗೆ ಸ್ವಾಗತ ಎಂದ ಕೇಜ್ರಿವಾಲ್

ಮಂಗಳವಾರ, 1 ಡಿಸೆಂಬರ್ 2015 (15:18 IST)
ಜನಲೋಕಪಾಲ್ ಮಸೂದೆಯ ಬಗ್ಗೆ ಗಾಂಧಿವಾದಿ ಅಣ್ಣಾ ಹಜಾರೆ ಸಲಹೆಗಳನ್ನು ನೀಡಿದಲ್ಲಿ ಸ್ವೀಕರಿಸುವುದಾಗಿ ದೆಹಲಿ ಸರಕಾರ ಬಹಿರಂಗ ಹೇಳಿಕೆ ನೀಡಿದೆ.
 
ಆಮ್ ಆದ್ಮಿ ಪಕ್ಷದ ಸದಸ್ಯ ಕುಮಾರ್ ವಿಶ್ವಾಸ್ ಮತ್ತು ಅಣ್ಣಾ ಹಜಾರೆ ಇಂದು ಪರಸ್ಪರ ಭೇಟಿಯಾಗಿ ಚರ್ಚೆ ನಡೆಸಿದ ಹಿನ್ನೆಲೆಯಲ್ಲಿ ಆಪ್ ಹೇಳಿಕೆ ಹೊರಬಿದ್ದಿದೆ.
 
ಜನಲೋಕಪಾಲ್‌ನಲ್ಲಿ ಆಯ್ಕೆ ಸಮಿತಿ ತುಂಬಾ ಪಾರದರ್ಶಕವಾಗಿರಲು ಇನ್ನಿತರ ಇಬ್ಬರು ವ್ಯಕ್ತಿಗಳನ್ನು ನೇಮಿಸಬೇಕು. ಜನಲೋಕಪಾಲ್  ವಜಾಗೊಳಿಸಬೇಕಾದಲ್ಲಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆಯಾಗಬೇಕು ಎಂದು ಹಜಾರೆ ದೆಹಲಿ ಸರಕಾರಕ್ಕೆ ಸಲಹೆ ನೀಡಿದ್ದಾರೆ 
 
ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೂರವಾಣಿಯಲ್ಲಿ ಚರ್ಚೆ ಮಾಡಲಾಗಿದ್ದು, ಜನಲೋಕಪಾಲ್  ಮಸೂದೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಕುಮಾರ್ ವಿಶ್ವಾಸ ತಿಳಿಸಿದ್ದಾರೆ.
 
ಜನಲೋಕಪಾಲ್ ಮಸೂದೆಯಲ್ಲಿರುವ ನೇಮಕಾತಿ ಮತ್ತು ವಜಾಗೊಳಿಸುವ ಪ್ರಕ್ರಿಯೆ ಬಗ್ಗೆ ಅಣ್ಣಾ ಹಜಾರೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
 
ಅಣ್ಣಾ ಹಜಾರೆಯವರು ಕೆಲ ಸಲಹೆಗಳನ್ನು ನೀಡಿದ್ದು ಹಜಾರೆಯವರ ಸಲಹೆಗಳ ಬಗ್ಗೆ ದೆಹಲಿಯಲ್ಲಿ ಚರ್ಚಿಸಲಾಗುವುದು ಎಂದು ಆಪ್ ಮುಖಂಡ ಕುಮಾರ್ ವಿಶ್ವಾಸ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ