ಮೋದಿಗೆ ಕೈಕೊಟ್ಟು ಪಾಕ್ ಪ್ರಧಾನಿ ನವಾಜ್ ಷರೀಫ್‌ಗೆ ಆಹ್ವಾನ ನೀಡಿದ ದೆಹಲಿಯ ಶಾಹಿ ಇಮಾಮ್ ಬುಖಾರಿ

ಗುರುವಾರ, 30 ಅಕ್ಟೋಬರ್ 2014 (15:47 IST)
ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್ ಸಯ್ಯದ್ ಅಹ್ಮದ್ ಬುಖಾರಿ ಇತ್ತೀಚೆಗೆ ತಮ್ಮ 19 ವರ್ಷದ ಪುತ್ರ ಶಾಬನ್ ಬುಖಾರಿ ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಉತ್ತರಾಧಿಕಾರತ್ವ ಸ್ವೀಕಾರ ಸಮಾರಂಭದಲ್ಲಿ ಬುಖಾರಿ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡದೆ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರಿಗೆ ಆಹ್ವಾನ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.  
 
ಉತ್ತರಾಧಿಕಾರತ್ವ ಸ್ವೀಕಾರ ಸಮಾರಂಭದಲ್ಲಿ ಬುಖಾರಿ ಪಾಕ್ ಪ್ರಧಾನಿ ನವಾಜ್ ಷರೀಫ್ ಸೇರಿದಂತೆ ದೇಶ ವಿದೇಶಗಳಲ್ಲಿರುವ 1000 ರಾಜಕೀಯ ನಾಯಕರು, ಧಾರ್ಮಿಕ ಮುಖಂಡರಿಗೆ ಆಹ್ವಾನ ನೀಡಿದ್ದಾರೆ 
 
ಆದಾಗ್ಯೂ, ಸಚಿವರಾದ  ರಾಜನಾಥ್ ಸಿಂಗ್ ಮತ್ತು ಡಾ.ಹರ್ಷವರ್ಧನ್ ಸೇರಿದಂತೆ ಹಲವಾರು ಸಚಿವರಿಗೆ ಆಹ್ವಾನ ನೀಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸೌಜನ್ಯಕಾದರೂ ಆಹ್ವಾನ ನೀಡದಿರುವುದು ರಾಜಕೀಯ ವಲಯಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
 

ವೆಬ್ದುನಿಯಾವನ್ನು ಓದಿ