ಜನವರಿ 22: ದೆಹಲಿಯಲ್ಲಿ ಕಾರ್ ಮುಕ್ತ ದಿನ

ಭಾನುವಾರ, 22 ನವೆಂಬರ್ 2015 (17:29 IST)
ಜನವರಿ 22 ರಂದು ರಾಷ್ಟ್ರ ರಾಜಧಾನಿಯಲ್ಲಿ ಕಾರುಗಳು ರಸ್ತೆಗಿಳಿಯುವುದಿಲ್ಲ. ದೆಹಲಿಯನ್ನು ಮಾಲಿನ್ಯ ಮುಕ್ತ ನಗರವನ್ನಾಗಿಸುವ ಹಂಬಲ ಹೊತ್ತಿರುವ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಜನವರಿ 22ರಂದು  ರಾಷ್ಟ್ರ ರಾಜಧಾನಿಯಲ್ಲಿ ‘ಕಾರು ಮುಕ್ತ  ದಿನ’ ಆಚರಿಸುವುದಾಗಿ ಹೇಳಿದ್ದಾರೆ.
 
'ದೆಹಲಿಯಲ್ಲಿ ಜನವರಿ 22ರಂದು ದೆಹಲಿಯಲ್ಲಿ ಕಾರು ಮುಕ್ತ ದಿನ ಆಚರಿಸಲಾಗುವುದು. ಅಂದು ನಾನು ಕೂಡ ಸೈಕಲ್‌ ತುಳಿದುಕೊಂಡೇ ಕಚೇರಿಗೆ ಬರುತ್ತೇನೆ', ಎಂದು ಅವರು ಟ್ವೀಟ್‌ ಮಾಡಿದ್ದಾರೆ.
 
ಕಾರ್ ಮುಕ್ತ ದಿನದ ಸಾಂಕೇತಿಕವಾಗಿ ದ್ವಾರಕಾದ ಸೆಕ್ಟರ್ 3-13 ಮತ್ತು ಸೆಕ್ಟರ್ 7-9 ಮಧ್ಯೆ ರಸ್ತೆಗಳಲ್ಲಿ ಇಂದು ಜಾಗೃತಿ ಜಾಥಾ ನಡೆಸಲಾಯಿತು. ಸೈಕಲ್ ತುಳಿದುಕೊಂಡೆ ಮೆರವಣಿಗೆಯಲ್ಲಿ ಸಾಗಿದ ಕೇಜ್ರಿವಾಲ್, ‘ಜನವರಿ 22ರಂದು ನಾವು ದೆಹಲಿಯಾದ್ಯಂತ ’ಕಾರು ಮುಕ್ತ ದಿನ’ ಸಂಘಟಿಸುತ್ತಿದ್ದೇವೆ. ಆ ದಿನ ಸಾರ್ವಜನಿಕ ಸಾರಿಗೆ ಇಲ್ಲವೇ ಸೈಕಲ್​ಗಳಲ್ಲಿ ಕಚೇರಿಗಳಿಗೆ ತೆರಳಿ', ಎಂದು ಜನತೆಗೆ ಮನವಿ ಮಾಡಿದರು.
 
ದೆಹಲಿಯಲ್ಲಿ ಸೈಕಲ್ ಟ್ರ್ಯಾಕ್​ಗಳನ್ನು ರಚಿಸುವ ಬಗ್ಗೆ ಆಮ್ ಆದ್ಮಿ ಸರ್ಕಾರ ಬದ್ಧವಾಗಿದೆ ಎಂದೂ ಮುಖ್ಯಮಂತ್ರಿ ಹೇಳಿದರು.

ವೆಬ್ದುನಿಯಾವನ್ನು ಓದಿ