ನೇತಾಜಿ ಹಠಾತ್ ಕಣ್ಮರೆಯ ನಿಗೂಢತೆ ಭೇದಿಸುವುದಕ್ಕೆ ಚಾಲನೆ

ಮಂಗಳವಾರ, 12 ಆಗಸ್ಟ್ 2014 (18:29 IST)
ಭಾರತರತ್ನ ಪ್ರಶಸ್ತಿಗೆ  ವೀರ ಸ್ವಾತಂತ್ರ್ಯಯೋಧ ನೇಜಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರು ಮುಖಪುಟಗಳಲ್ಲಿ ರಾರಾಜಿಸುತ್ತಿರುವ ನಡುವೆ, ನೇಜಾಜಿ ಅವರ ಹಠಾತ್ ಕಣ್ಮರೆಯ ನಿಗೂಢತೆ ಭೇದಿಸಬೇಕೆಂಬ ಬೇಡಿಕೆಗೆ ಚಾಲನೆ ಸಿಕ್ಕಿದೆ.

ಆದರೆ ನೇತಾಜಿ ಅವರ ಹಠಾತ್ ಕಣ್ಮರೆಯ ಹಿಂದಿನ ನಿಗೂಢತೆ ಕುರಿತು ವಿವರಗಳನ್ನು ಒದಗಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕೆಂದು ಕೋರಿದ ಅರ್ಜಿಯ ಬಗ್ಗೆ ತಕ್ಷಣವೇ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.ಮುಖ್ಯನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠ ವಿಚಾರಣೆಗೆ ನಿರಾಕರಿಸಿ, ವಕೀಲ ಎಂ.ಎಲ್. ಶರ್ಮಾ ಅವರಿಗೆ ತಕ್ಷಣದ ವಿಚಾರಣೆಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

ಸರ್ಕಾರ ನೇತಾಜಿ ಅವರಿಗೆ ಮರಣೋತ್ತರವಾಗಿ ಆಗಸ್ಟ್ 15ರ ಸುಮಾರಿಗೆ ಭಾರತರತ್ನ ನೀಡಬಹುದು, ಅದು ಸಂಭವಿಸುವುದಕ್ಕೆ ಮುಂಚೆ, ನೇತಾಜಿ ಸುತ್ತುವರಿದ ನಿಗೂಢತೆ ಕುರಿತು ಸಮಿತಿಯ ವರದಿಯನ್ನು ಬಹಿರಂಗ ಮಾಡಬೇಕು ಎಂದು ತಿಳಿಸಿದರು. 

ವೆಬ್ದುನಿಯಾವನ್ನು ಓದಿ