ಮದ್ಯ ನೀಡಲು ನಿರಾಕರಿಸಿದ ಗಗನಸಖಿ: ವಿಮಾನದಲ್ಲಿ ಗದ್ದಲವೆಬ್ಬಿಸಿದ ಪ್ರಯಾಣಿಕ

ಮಂಗಳವಾರ, 28 ಏಪ್ರಿಲ್ 2015 (16:13 IST)
ರಿಯಾದ್‌ನಿಂದ ಕ್ಯಾಲಿಕಟ್‌ಗೆ ಏರಿಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಹೆಚ್ಚಿನ ಮದ್ಯ ನೀಡಲಿಲ್ಲ ಎನ್ನುವ ಕಾರಣಕ್ಕೆ ಕ್ಯಾಬಿನ್ ಸೀಟ್‌ಗಳನ್ನು ಧ್ವಂಸಗೊಳಿಸಿದ್ದಲ್ಲದೇ ಇತರ ಪ್ರಯಾಣಿಕರನ್ನು ಬೆದರಿಸಿದ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಏರ್‌ಲೈನ್ಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕ ಥಾಟೆತಿಲ್ ನಿಜೇಶ್ ನಿರಂತರವಾಗಿ ಮದ್ಯಕ್ಕಾಗಿ ಮನವಿ ಮಾಡುತ್ತಿದ್ದು. ಹಲವಾರು ಬಾರಿ ಆತನ ಬೇಡಿಕೆ ಪೂರೈಸಿದರು ಆತನ ಬೇಡಿಕೆ ಹೆಚ್ಚುತ್ತಾ ಹೋಗಿದೆ. ತದನಂತರ ಮದ್ಯ ನೀಡಲಾಗುವುದಿಲ್ಲ ಎಂದು ವಿಮಾನದ ಸಿಬ್ಬಂದಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿಯ ಮೇಲೆ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.  

ಕ್ಯಾಲಿಕಟ್‌ನಲ್ಲಿ ವಿಮಾನ ಲ್ಯಾಂಡ್‌ ಆದ ಕೂಡಲೇ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಗಿದ್ದು, ಭದ್ರತಾ ಸಿಬ್ಬಂದಿ ಆರೋಪಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಯಾಣಿಕನ ವರ್ತನೆಯಿಂದಾಗಿ ವಿಮಾನವನ್ನು ಬೇರೆ ವಿಮಾನ ನಿಲ್ದಾಣದಲ್ಲಿ ಇಳಿಸುವುದರಿಂದ ವಿಮಾನಯಾನ ಸಂಸ್ಥೆಗೆ ಹೆಚ್ಚಿನ ವೆಚ್ಚವಾಗುತ್ತದೆ.ಆದ್ದರಿಂದ, ಕ್ಯಾಲಿಕಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ನಂತರ ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲಾಯಿತು ಎಂದು ವಿಮಾನಯಾನ ಸಿಬ್ಬಂದಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ