ದೆಹಲಿ ಗ್ಯಾಂಗ್ ರೇಪ್ ಒಂದು "ಸಣ್ಣ" ಘಟನೆ: ಜೇಟ್ಲಿ ಹೇಳಿಕೆಯಿಂದ ವಿವಾದ

ಶುಕ್ರವಾರ, 22 ಆಗಸ್ಟ್ 2014 (11:21 IST)
ಹಣಕಾಸು ಸಚಿವ ಅರುಣ್ ಜೇಟ್ಲಿ 2012ರ ದೆಹಲಿ ಗ್ಯಾಂಗ್ ರೇಪ್ ಪ್ರಕರಣವನ್ನು "ರೇಪ್‌ನ ಸಣ್ಣ ಘಟನೆ" ಎಂದು ಹೇಳಿಕೆ ನೀಡಿದ್ದು ತೀವ್ರ ವಿವಾದಕ್ಕೆ ಆಸ್ಪದ ಕಲ್ಪಿಸಿದೆ. ದೆಹಲಿಯಲ್ಲಿ ರೇಪ್‌ನ ಒಂದು ಸಣ್ಣ ಘಟನೆ ವಿಶ್ವಾದ್ಯಂತ ಪ್ರಸಾರವಾಗಿ ಜಾಗತಿಕ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಕೋಟ್ಯಂತರ ಡಾಲರ್ ನಷ್ಟವಾಗುತ್ತದೆ ಎಂದು ಜೇಟ್ಲಿ ದೆಹಲಿಯಲ್ಲಿ ಪ್ರವಾಸೋದ್ಯಮ ಸಚಿವರ ಸಮಾವೇಶದಲ್ಲಿ ಗುರುವಾರ ತಿಳಿಸಿದ್ದರು.
 
ಇಂತಹ ಘಟನೆಗಳು ಸಂಭವಿಸದಂತೆ ರಾಷ್ಟ್ರೀಯ ಜವಾಬ್ದಾರಿ ನಮಗಿದೆ ಎಂದು ಅವರು ಹೇಳಿದ್ದರು. ಜೇಟ್ಲಿ ಹೇಳಿಕೆಯಿಂದ ತಮಗೆ ತೀವ್ರ ನೋವಾಗಿದೆ ಎಂದು ರೇಪ್ ಮತ್ತು ಹತ್ಯೆಗೀಡಾದ ಬಾಲಕಿಯ ತಾಯಿ ಹೇಳಿದ್ದಾರೆ. ಅವರು ರಾಜಕೀಯ ಉದ್ದೇಶಕ್ಕಾಗಿ ನಿರ್ಭಯಾ ಹೆಸರನ್ನು ಕೈಗೆತ್ತಿಕೊಂಡರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಈ ಘಟನೆಯನ್ನು ಸಣ್ಣದಾಗಿಸಿದರು ಎಂದು ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಶೋಭಾ ಓಜಾ ಇದೊಂದು ಬುದ್ಧಿಗೇಡಿ ಹೇಳಿಕೆ.

ಅವರು ರಾಷ್ಟ್ರದ ಮಹಿಳೆಯರ ಕ್ಷಮಾಪಣೆ ಕೇಳಬೇಕು ಎಂದಿದೆ.ಜೇಟ್ಲಿ ಭಾಷಣದಿಂದ "ಸಣ್ಣ" ಪದವನ್ನು ಸರ್ಕಾರದ ಪ್ರಚಾರ ನಿರ್ವಹಿಸುವ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ತೆಗೆದಿದೆ. ಆದರೆ ಅದರಿಂದ ರಿವರ್ಸ್ ಎಫೆಕ್ಟ್(ತಿರುಗುಮುರುಗು ಪರಿಣಾಮ) ಉಂಟಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟೀಕಾಪ್ರವಾಹ ನಿಲ್ಲಿಸಲು ನೆರವಾಗಿಲ್ಲ.ನಿರ್ಭಯಾ ಜೀವನ ನಿಮ್ಮ ಶತಕೋಟಿ ಡಾಲರ್‌ಗಿಂತ ಹೆಚ್ಚು ಅಮೂಲ್ಯವಾಗಿದೆ. ಅದೇನು ಸಣ್ಣ ವಿಷಯವಲ್ಲ ಎಂದು ಕೋಮಲ್ ತಿವಾರಿ ಪೋಸ್ಟ್ ಮಾಡಿದ್ದಾರೆ. 

ವೆಬ್ದುನಿಯಾವನ್ನು ಓದಿ