ಜಯಲಲಿತಾ ಅನಾರೋಗ್ಯದ ಮಧ್ಯೆಯೂ ನೂತನ ಸಿಎಂ ಆಯ್ಕೆಗೆ ಕಸರತ್ತು

ಸೋಮವಾರ, 5 ಡಿಸೆಂಬರ್ 2016 (17:01 IST)
ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅನಾರೋಗ್ಯದ ಮಧ್ಯೆಯೂ ಎಐಎಡಿಎಂಕೆ ನಾಯಕರು ನೂತನ ಸಿಎಂ ಆಯ್ಕೆಗೆ ಸಹಿ ಸಂಗ್ರಹ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
 ಸಿಎಂ ಜಯಲಲಿತಾ ಕಳೆದ ಮೂರು ತಿಂಗಳುಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ನಿನ್ನೆ ಹೃದಯಾಘಾತ ಸಹ ಸಂಭವಿಸಿದ್ದು, ತಮಿಳುನಾಡು ರಾಜ್ಯದಾದ್ಯಂತ ಉದ್ರಿಕ್ತ ವಾತಾವರಣ ಎದುರಾಗಿದೆ.
 
ಜಯಲಲಿತಾ ಆಪ್ತ ಪನ್ನಿರ್ ಸೆಲ್ವಂ ಮುಂದಿನ ಸಿಎಂ ಎಂದು ಹೇಳಲಾಗುತ್ತಿದ್ದು, ಅಪೊಲೋ ಆಸ್ಪತ್ರೆಯಲ್ಲಿ ಈ ಬಗ್ಗೆ ಕಸರತ್ತು ನಡೆದಿದೆ. ಅಣ್ಣಾಡಿಎಂಕೆ ಶಾಸಕರನ್ನ ಒಬ್ಬೊಬ್ಬರನ್ನೇ ಕರೆದು ಮುಂದಿನ ಸಿಎಂ ಆಗಿ ಪನ್ನೀರ್ ಸೆಲ್ವಂ ಆಯ್ಕೆಗೆ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದು ಮೂಲಗಳನ್ನ ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
 
ಜಯಲಲಿತಾ ಕಟ್ಟಾ ಬೆಂಬಲಿಗರಾದ ಮಾಜಿ ಮುಖ್ಯಮಂತ್ರಿ  ಓ.ಪನ್ನೀರ್ ಸೆಲ್ವಂ ಬಹುತೇಕ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ  ಎಂದು ಮೂಲಗಳು ತಿಳಿಸಿವೆ.  ಎಐಎಡಿಎಂಕೆ ನಾಯಕರು ನಾಯಕ ಪನ್ನೀರ್ ಸೆಲ್ವಂ ನೇತೃತ್ವದಲ್ಲಿ ಶಾಸಕರ ಸಹಿ ಸಂಗ್ರಹಣೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ