ಗ್ರಾಹಕರಿಗೆ ಖುಷಿ: ಡೀಸೆಲ್ ದರದಲ್ಲಿ 1 ರೂ, ಪೆಟ್ರೋಲ್‌‍ 1.75 ಪೈಸೆ ಕಡಿತ ಸಾಧ್ಯತೆ

ಮಂಗಳವಾರ, 30 ಸೆಪ್ಟಂಬರ್ 2014 (18:30 IST)
ಪ್ರತಿ ಬಾರಿಗೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು  ಈ ಬಾರಿ ಪ್ರತಿ ಲೀಟರಿಗೆ ಕ್ರಮವಾಗಿ 1 ರೂಪಾಯಿ ಹಾಗೂ 1.75 ರೂಪಾಯಿಗಳಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ. ಡೀಸೆಲ್‌ ದರ ಇಳಿಕೆಯಾಗಲಿರುವ ಐದು ವರ್ಷಗಳಲ್ಲಿ ಇದು ಮೊದಲ ಬಾರಿಯಾಗಿದೆ.
 
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಇಳಿಕೆ ಕಂಡಿದ್ದು, ಮಂಗಳವಾರ ಸಂಜೆಯ ವೇಳೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ದರ ಕಡಿತ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ಸರ್ಕಾರಿ ಹಾಗೂ ಕೈಗಾರಿಕಾ ಮೂಲಗಳು ಹೇಳಿವೆ.
 
ಆಮದು ದರ ಹಾಗೂ ಚಿಲ್ಲರೆ ಮಾರಾಟದ ನಡುವಣ ಬೆಲೆ ವ್ಯತ್ಯಾಸ ಅಳೆದಿದೆ. ಸೆಪ್ಟೆಂಬರ್‌  16ರಿಂದ ಪ್ರತಿ ಲೀಟರ್‌ ತೈಲಕ್ಕೆ 35 ಪೈಸೆಗಳಷ್ಟು ಹೆಚ್ಚುವರಿ ಲಾಭ ಸಿಗುತ್ತಿದೆ. ಸದ್ಯ ಈ ಲಾಭದ ಪ್ರಮಾಣ ಪ್ರತಿ ಲೀಟರ್‌ಗೆ ಸುಮಾರು ಒಂದು ರೂಪಾಯಿ ವರೆಗೂ ಹೆಚ್ಚಿದೆ.
 
ಈ ಸಂಬಂಧ ಇಂಧನ ಸಚಿವ ಧಮೇಂದ್ರ ಪ್ರಧಾನ್‌ ಅವರು ಪ್ರಧಾನಿ ಮೋದಿಗೆ ಪತ್ರ ಬರೆದ್ದಾರೆ ಎನ್ನಲಾಗಿದೆ. ಅಲ್ಲದೇ ಮುಂದಿನ ತಿಂಗಳು ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯಗಳಲ್ಲಿ  ಚುನಾವಣೆಯ ನಡೆಯಲಿರುವ ಕಾರಣ ದರ ಇಳಿಕೆ ಪ್ರಸ್ತಾವಕ್ಕೆ ಸಹಮತ ನೀಡುವಂತೆ ಕೋರಿ ಚುನಾವಣಾ ಆಯೋಗಕ್ಕೂ ಪ್ರಧಾನ್‌ ಅವರು ಪತ್ರ ಬರೆದಿದ್ದಾರೆ.
 
2009ರ ಜನವರಿ 29ರಂದು ಕೊನೆಯ ಬಾರಿಗೆ ಡೀಸೆಲ್‌ ದರವನ್ನು ಪ್ರತಿ ಲೀಟರ್‌ಗೆ ಎರಡು ರೂಪಾಯಿಗಳಷ್ಟು ಇಳಿಸಲಾಗಿತ್ತು. ಆಗೀನ ದರ ಲೀಟರ್ ಡೀಸೆಲ್‌ಗೆ 30.86 ರೂಪಾಯಿ.

ವೆಬ್ದುನಿಯಾವನ್ನು ಓದಿ