2019ರವರೆಗೆ ಪ್ರತಿಯೊಬ್ಬ ಭಾರತೀಯನ ಹತ್ತಿರವಿರಲಿವೆ ಸ್ಮಾರ್ಟ್‌‌ಫೋನ್‌

ಮಂಗಳವಾರ, 26 ಆಗಸ್ಟ್ 2014 (19:33 IST)
ಡಿಜಿಟಲ್‌‌ ಇಂಡಿಯಾ ಪ್ರೊಜೆಕ್ಟ್‌ನಿಂದ ಪ್ರತಿಯೊಬ್ಬ ದೇಶವಾಸಿಗಳ ಹತ್ತಿರ 2019ರವರೆಗೆ ಸ್ಮಾರ್ಟ್‌‌‌ಫೋನ್‌‌ ಇರಲಿದೆ. ಇವರು ಸರಕಾರದ ಸೇವೆಗಳ ಲಾಭವನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದಾಗಿದೆ. 1.13 ಲಕ್ಷ ಕೋಟಿ ರೂಪಾಯಿಗಳ ಈ ಯೋಜನೆಯಿಂದ ಭಾರತೀಯ ಆರ್ಥಿಕತೆಗೆ ಬಹಳಷ್ಟು ಲಾಭವಾಗಲಿದೆ ಎಂದು ಆರ್ಥಿಕ ಪತ್ರಿಕೆಯೊಂದು ತಿಳಿಸಿದೆ. 
 
ಸರಕಾರದ ಈ ಯೋಜನೆಯಿಂದ ಎಲೆಕ್ಟ್ರಾನಿಕ್ಸ್‌‌ ವಸ್ತುಗಳ ಉತ್ಪಾದನೆ ಹೆಚ್ಚಳವಾಗುವುದು ಮತ್ತು ಲಕ್ಷಾಂತರ ಜನರಿಗೆ ಉದ್ಯೋಗಗಳು ಲಭಿಸಲಿವೆ. ಮೋದಿ ಸರಕಾರ ಬಯಸುವುದೇನೆಂದರೆ, 2019ರವರೆಗೆ ಪ್ರತಿಯೊಬ್ಬ ಭಾರತೀಯನ ಹತ್ತಿರ ಸ್ಮಾರ್ಟ್‌‌‌ಫೋನ್‌ ಇರಬೇಕು. ಸದ್ಯಕ್ಕೆ ದೇಶದಲ್ಲಿ ಶೇ.74ರಷ್ಟು ಜನರ ಹತ್ತಿರ ಮೊಬೈಲ್‌ ಫೋನ್‌‌ ಇದೆ ಆದರೆ, ಈ ಪ್ರಮಾಣ ಭಾಗಶಃ ನಗರಗಳಲ್ಲಿ ಹೆಚ್ಚಿಗಿದೆ ಎಂದು ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ. 
 
ಎಲ್ಲಾ ತರಹದ ಸೇವೆಗಳಾದ ಆರೋಗ್ಯ, ಶಿಕ್ಷಣ ಮತ್ತು ಇತರ ಸೇವೆಗಳನ್ನು ಮೊಬೈಲ್‌ ಫೋನ್‌ ಮೂಲಕ ನೀಡಲು ಸರಕಾರ ಬಯಸುತ್ತದೆ. ನಾವು ಇದನ್ನು ಸಶಕ್ತಿಕರಣದ ಸಬಲಿಕರಣ ರೂಪದಲ್ಲಿ ಬಳಕೆಮಾಡಲು ಇಚ್ಛಿಸುತ್ತೇವೆ ಎಂದು ರವಿಶಂಕರ್‌ ತಿಳಿಸಿದ್ದಾರೆ. 
 
ಪ್ರಧಾನ ಮಂತ್ರಿ ಜನ್‌‌‌-ಧನ್‌‌ ಯೋಜನೆಯಡಿ ಗ್ರಾಮೀಣ ಭಾಗದ ಪ್ರತಿ ಕನಿಷ್ಠ ವ್ಯಕ್ತಿಗೂ ಆರ್ಥಿಕ ಸಹಾಯ ಸಿಗಬೇಕು. ಇದಕ್ಕಾಗಿ ಮೊಬೈಲ್‌‌ ಪೋನ್‌‌‌ನ ಅವಶ್ಯಕತೆ ಇದೆ. ಏಕೆಂದರೆ, ಇದರಿಂದ ಮೊಬೈಲ್‌ ಬ್ಯಾಂಕಿಂಗ್‌‌‌ ಬಳಸಬಹುದಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮನೆಗೆ ಬ್ಯಾಂಕ್‌ ಖಾತೆ ತೆಗೆಯಲಾಗುವುದು ಮತ್ತು ಖಾತೆದಾರರಿಗೆ ಒಂದು ಲಕ್ಷ ರೂಪಾಯಿ ವಿಮೆ ಸಿಗುವುದು.

ವೆಬ್ದುನಿಯಾವನ್ನು ಓದಿ