ರಾಮಜನ್ಮಭೂಮಿಗೆ ಮಾಜಿ ಪ್ರಧಾನಿ ರಾಜೀವ್ ಚಾಲನೆ ನೀಡಿಲ್ಲ: ಪ್ರಣಬ್‌ಗೆ ದಿಗ್ವಿಜಯ್ ಸಿಂಗ್ ಟಾಂಗ್

ಶುಕ್ರವಾರ, 29 ಜನವರಿ 2016 (21:01 IST)
ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ದ್ವಾರ ತೆಗೆಯುವ ನಿರ್ಧಾರ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರದ್ದಲ್ಲ ಕೋರ್ಟ್ ಆದೇಶದಂತೆ ತೆರೆಯಲಾಯಿತು ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ. 
 
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಮ್ಮ ಆತ್ಮಕಥನದಲ್ಲಿ ರಾಮಜನ್ಮಭೂಮಿ ದ್ವಾರ ತೆಗೆದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ತಪ್ಪೆಸಗಿದ್ದರು ಎಂದು ಬರೆದಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. 
 
ರಾಮಜನ್ಮಭೂಮಿಯಲ್ಲಿ ಶಿಲಾನ್ಯಾಸ ನೆರವೇರಿಸುವುದು ತಪ್ಪಾಗಿರಬಹುದು. ರಾಜೀವ್ ಗಾಂಧಿ ಅಂತಹ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ ಕೋರ್ಟ್ ಆದೇಶ ನೀಡಿತ್ತು ಎಂದು ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
 
ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸ ಮತ್ತು ರಾಮಜನ್ಮಭೂಮಿಗೆ ಶಿಲಾನ್ಯಾಸ ಮಾಡಿರುವುದರಿಂದ ದೇಶದ ಇಮೇಜ್‌ಗೆ ಅಪಖ್ಯಾತಿ ತಂದಿತ್ತು ಎಂದು ಪ್ರಣಬ್ ವಿಷಾದ ವ್ಯಕ್ತಪಡಿಸಿದ್ದರು. 
 
ಬಾಬ್ರಿ ಮಸೀದಿ ಧ್ವಂಸಕ್ಕೆ ಅವಕಾಶ ನೀಡಿದ ಮಾಜಿ ಪ್ರಧಾನಿ ಪಿ.ವಿ.ನರಸಿಂಹ್ ರಾವ್ ಅವರದ್ದು ದೊಡ್ಡ ವೈಫಲ್ಯ ಎನ್ನುವುದನ್ನು ದಿಗ್ವಿಜಯ್ ಸಿಂಗ್ ಒಪ್ಪಿಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ