ಮಹಾಶಿವರಾತ್ರಿ ಹಬ್ಬದಂದು ಉಗ್ರರ ದಾಳಿ ಸಾಧ್ಯತೆ: ಸೇನಾ ಕಮಾಂಡರ್

ಶನಿವಾರ, 5 ಮಾರ್ಚ್ 2016 (18:37 IST)
ಲೋಕಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನ ಮತ್ತು ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ  ಉಗ್ರರು ದಾಳಿ ನಡೆಸುವ ಬಗ್ಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಆದರೆ ಉಗ್ರರನ್ನು ಹಿಮ್ಮೆಟ್ಟಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
 
ದೇಶದಲ್ಲಿ ಪ್ರಸ್ತುತ ಭದ್ರತಾ ಸಮಸ್ಯೆಗಳಿರುವ ಮಧ್ಯೆಯೇ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಪಡೆಯುವ ಉದ್ದೇಶದಿಂದ ಮಹಾಶಿವರಾತ್ರಿ ಹಬ್ಬದಂದು ಉಗ್ರರು ದಾಳಿ ನಡೆಸುವ ಸಂಚು ರೂಪಿಸಿವೆ ಎಂದು ವೆಸ್ಟರ್ನ್ ಆರ್ಮಿ ಕಮಾಂಡರ್ ಕೆ.ಜೆ.ಸಿಂಗ್ ಮಾಹಿತಿ ನೀಡಿದ್ದಾರೆ. 
 
ಲೋಕಸಭೆಯಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಹಾಶಿವರಾತ್ರಿ ಹಬ್ಬ ಬಂದಿರುವುದರಿಂದ ಉಗ್ರರು ದೇಶದ ಮೇಲೆ ದಾಳಿ ನಡೆಸಿ ಹೆಚ್ಚಿನ ಪ್ರಚಾರ ಪಡೆಯಲು ಬಯಸಿದ್ದಾರೆ. ಆದರೆ, ಉಗ್ರರಿಗೆ ತಕ್ಕ ಪಾಠ ಕಲಿಸಲು ಸೇನೆ ಸರ್ವ ಸನ್ನದ್ಧವಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. 
 
ಉಗ್ರರ ಇಂತಹ ಚಿಲ್ಲರೆ ಕೃತ್ಯಗಳಿಂದ ಭಾರತದಂತಹ ಮಹಾನ್ ರಾಷ್ಟ್ರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು. ಭಾರತೀಯ ಸೇನೆ ಉಗ್ರರನ್ನು ಸದೆಬಡೆಯಲು ಪ್ರತಿತಂತ ರೂಪಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ