ಗುಪ್ತ ಮತದಾನಕ್ಕೆ ಒತ್ತಾಯಿಸಿದ ಎಂ.ಕೆ. ಸ್ಟಾಲಿನ್: ಸ್ಪೀಕರ್ ತಿರಸ್ಕಾರ

ಶನಿವಾರ, 18 ಫೆಬ್ರವರಿ 2017 (12:04 IST)
ವಿಶ್ವಾಸಮತ ಸಂದರ್ಭದಲ್ಲಿ ಶಾಸಕರ ಮೇಲೆ ಕೆಲ ನಾಯಕರು ಒತ್ತಡ ಹೇರುತ್ತಿರುವುದರಿಂದ ರಹಸ್ಯ ಮತದಾನ ನಡೆಸುವಂತೆ ವಿಪಕ್ಷ ನಾಯಕ ಸ್ಟಾಲಿನ್ ಸಭಾಪತಿ ಧನಪಾಲ್‌ರನ್ನು ಒತ್ತಾಯಿಸಿದ್ದಾರೆ.
 
ವಿಶ್ವಾಸಮತ ಯಾಚನೆಯಲ್ಲಿ ಯಾಕೆ ತರಾತುರಿ ಮಾಡಲಾಗುತ್ತಿದೆ. ರೆಸಾರ್ಟ್ ವಿಷಯ ಪ್ರಸ್ತಾಪಿಸಲು ಸಭಾಪತಿ ಯಾಕೆ ಬಿಡುತ್ತಿಲ್ಲ. ಚರ್ಚೆಗೆ ಅವಕಾಶ ಕೊಡದೆ ಮತದಾನಕ್ಕೆ ಯಾಕೆ ಅನುಮತಿ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ವಿಶ್ವಾಸಮತಯಾಚನೆ ಮುಂದೂಡಿ ಚರ್ಚೆಗೆ ಅವಕಾಶ ಕೊಡಿ. ಪ್ರಜಾತಂತ್ರದಲ್ಲಿ ಪ್ರಜಾ ವ್ಯವಸ್ಥೆಗೆ ಅವಕಾಶ ನೀಡುವುದು ಅಗತ್ಯ ಎಂದು ಸಲಹೆ ನೀಡಿದ್ದಾರೆ.
 
ಡಿಎಂಕೆ ಮನವಿಯನ್ನು ತಿರಸ್ಕರಿಸಿದ ಸಭಾಪತಿ ಧನಪಾಲ್, ತಲೆ ಏಣಿಕೆ ಮೂಲಕವೇ ವಿಶ್ವಾಸಮತ ಯಾಚನೆ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ