ಸ್ಪೀಕರ್ ಮೈಕುಗಳನ್ನು ಕಿತ್ತೆಸೆದು ಆರ್ಭಟಿಸಿದ ಶಾಸಕರು, ಅವಾಚ್ಯ ಶಬ್ದಗಳಿಂದ ಸ್ಪೀಕರ್‌ರನ್ನು ನಿಂದಿಸಿದ್ದಾರೆ.ಸ್ಪೀಕರ್‌ರನ್ನು ಹೊರಗೆ ತಳ್ಳಿ ಅವರ ಖುರ್ಚಿಯ ಮೇಲೆ ಸರದಿಯಂತೆ ಶಾಸಕರು ಕುಳಿತು ಮ್ಯೂಸಿಕ್ ಚೇರ್ ಮಾಡಿಕೊಂಡು ಪ್ರಜಾಪ್ರಭಉತ್ವಕ್ಕೆ ಮಸಿ ಬಳೆದಿದ್ದಾರೆ.
ಶಾಸಕರ ಕೂಗಾಟ, ಹೊಡೆದಾಟ, ಬೈಗುಳಗಳ ಅಬ್ಬರಕ್ಕೆ ಸದನದಲ್ಲಿದ್ದ ಕುರ್ಚಿಗಳು ಪುಡಿಪುಡಿಯಾಗಿದ್ದು ಮೇಜುಗಳು ಜಖಂಗೊಂಡಿದ್ದು, ಒಬ್ಬ ಅಟೆಂಡರ್‌ಗೆ ಗಾಯವಾಗಿದೆ. ಅಂಬುಲೆನ್ಸ್‌ನಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸದನ ಆರಂಭವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಬಣ, ಡಿಎಂಕೆ, ಹಾಗೂ ಇತರ ವಿಪಕ್ಷಗಳು ರಹಸ್ಯ ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಅದಕ್ಕೊಪ್ಪದ ಸ್ಪೀಕರ್ ಧ್ವನಿ ಮತದಾನ ನಡೆಸಲು ಆರಂಭಿಸಿದ್ದಾರೆ.