ತಮಿಳುನಾಡು: ಉಪ ಚುನಾವಣೆ ಬಹಿಷ್ಕರಿಸಿದ ಡಿಎಂಕೆ

ಬುಧವಾರ, 27 ಮೇ 2015 (17:49 IST)
ಜೂನ್ 27 ರಂದು ತಮಿಳುನಾಡಿನ ರಾಧಾಕೃಷ್ಣನ್ ನಗರ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಡಿಎಂಕೆ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಹೇಳಿದ್ದಾರೆ.
 
ವಿಧಾನಸಭೆಗೆ ಚುನಾವಣೆ ನಡೆಯಲು ಕೇವಲ ಒಂದು ವರ್ಷ ಮಾತ್ರ ಬಾಕಿಯಿದೆ. ಉಪಚುನಾವಣೆಯಲ್ಲಿ ಪ್ರಜಾಪ್ರಭುತ್ವದ ನಿಯಮಗಳು ಅನುಸರಿಸುವದಿಲ್ಲವಾದ್ದರಿಂದ ಡಿಎಂಕೆ ಪಕ್ಷ ಚುನಾವಣೆ ಕಣದಿಂದ ಹಿಂದೆ ಸರಿದಿದೆ ಎಂದು ತಿಳಿಸಿದ್ದಾರೆ. 
 
ಎಐಎಡಿಎಂಕೆ ಶಾಸಕ ಪಿ.ವೆಟ್ರಿವೇಲು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಅಕ್ರಮ ಆಸ್ತಿ ಪ್ರಕರಣದಲ್ಲಿ ನಿರ್ದೋಶಿಯಾಗಿರುವ ಮುಖ್ಯಮಂತ್ರಿ ಜೆ.ಜಯಲಲಿತಾ ರಾಧಾಕೃಷ್ಣ ನಗರ್ ವಿಧಾನಸಭೆ ಕ್ಷೇತ್ರದ ಉಫಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ಕಳೆದ ಮೇ 2011ರಲ್ಲಿ ರಾಜ್ಯದ ಶ್ರೀರಂಗಂ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಜಯಲಲಿತಾ, ಅಕ್ರಮ ಆಸ್ತಿ ಪ್ರಕರಣದಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿದ್ದರಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 
 
ಮುಖ್ಯಮಂತ್ರಿ ಜಯಲಲಿತಾ ವಿಧಾನಸಭೆಯ ಸದಸ್ಯರಾಗಿಲ್ಲವಾದ್ದರಿಂದ ಆರು ತಿಂಗಳೊಳಗಾಗಿ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾಗುವ ಅನಿವಾರ್ಯತೆಯಿದೆ. 
 

ವೆಬ್ದುನಿಯಾವನ್ನು ಓದಿ