ಇತ್ತೀಚಿಗೆ ವೈದ್ಯರ ನಿರ್ಲಕ್ಷದಿಂದ ಆಗುತ್ತಿರುವ ಅನಾಹುತಗಳ ವರದಿ ಸಾಮಾನ್ಯವಾಗಿ ಬಿಟ್ಟಿದೆ. ಜೀವರಕ್ಷಕರೆಂದು ಕರೆಸಿಕೊಳ್ಳುತ್ತಿದ್ದ ವೈದ್ಯರೀಗಿಗ ಜೀವ ಭಕ್ಷಕರಾಗುತ್ತಿದ್ದಾರೆ. ಅದಕ್ಕೊಂದು ತಾಜಾ ಉದಾಹರಣೆ ಎಂಬಂತೆ ಜಮ್ಮುವಿನಲ್ಲೊಬ್ಬ ವೈದ್ಯ ತಾಯಿಯೊಬ್ಬಳ ತಾಯ್ತನವನ್ನೇ ಕಿತ್ತುಕೊಂಡಿದ್ದಾನೆ. ಇನ್ನೊಂದು ತಿಂಗಳಲ್ಲಿ ಹೊರ ಜಗತ್ತಿಗೆ ಬರಲಿದ್ದ ಕೂಸನ್ನು ಕಾಣದ ಲೋಕಕ್ಕೆ ಕಳುಹಿಸಿದ್ದಾನೆ. ಅಷ್ಟಕ್ಕೂ ಆತ ಮಾಡಿದ್ದೇನು ಅಂತೀರಾ...ಗ್ಲುಕೋಸ್ ನೀಡುವ ಬದಲು ಗರ್ಭಪಾತದ ಮಾತ್ರೆಯನ್ನು ನೀಡಿ 8 ತಿಂಗಳ ಗರ್ಭದ ಪ್ರಾಣವನ್ನೇ ಹೀರಿ ಬಿಟ್ಟಿದ್ದಾನೆ ಆತ.
8 ತಿಂಗಳ ತುಂಬು ಗರ್ಭಿಣಿ ಶ್ರುತಿ ಶರ್ಮಾ ಎಂದಿನಂತೆ ರೆಗ್ಯುಲರ್ ಚೆಕ್ ಅಪ್ಗೆಂದು ನಗರದಲ್ಲಿರುವ ಖಾಸಗಿ ಆಸ್ಪತ್ರೆ ಜಿಕೆ ಮೆಡಿಸಿಟಿಗೆ ಭೇಟಿ ನೀಟಿ ವೈದ್ಯೆಯನ್ನು ಭೇಟಿಯಾದರು. ಆ ವೈದ್ಯರು ಆಕೆಗೆ ಗ್ಲುಕೋಸ್ ಮಾತ್ರೆ ನೀಡುವಂತೆ ತಮ್ಮ ಸಹೋದ್ಯೋಗಿ ವೈದ್ಯರ ಬಳಿ ಹೇಳಿದರು. ಆದರೆ ಆ ವೈದ್ಯ ಮತ್ತು ಇಬ್ಬರು ನರ್ಸ್ಗಳು ನಿರ್ಲಕ್ಷದಿಂದ ಬೇರೆ ಮಹಿಳೆಗೆ ನೀಡಬೇಕಿದ್ದ ಗರ್ಭಪಾತದ ಮಾತ್ರೆಯನ್ನು ಶ್ರುತಿ ಶರ್ಮಾರಿಗೆ ನೀಡಿದ್ದಾರೆ. ಅದನ್ನು ಸೇವಿಸಿದ ಆಕೆ ಮನೆಗೆ ಮರಳಿದ್ದಾಳೆ.