ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು: ನಿರ್ಭಯಾ ತಂದೆ

ಗುರುವಾರ, 5 ಮಾರ್ಚ್ 2015 (12:55 IST)
ಒಂದು ಕಡೆ ನಿರ್ಭಯಾ ಕುರಿತ ಬಿಬಿಸಿ ಸಾಕ್ಷ್ಯ ಚಿತ್ರವನ್ನು ಪ್ರಸಾರ ಮಾಡದಂತೆ ಸರ್ಕಾರ ಮತ್ತು ದೆಹಲಿ ಹೈಕೋರ್ಟ್ ನಿಷೇಧ ವಿಧಿಸಿದ್ದರೆ, ಆ ಸಾಕ್ಷ್ಯಚಿತ್ರವನ್ನು ಪ್ರತಿಯೊಬ್ಬರೂ ನೋಡಬೇಕು ಎಂದು ನಿರ್ಭಯಾ ತಂದೆ ಹೇಳಿದ್ದಾರೆ. ಭಾರತದಲ್ಲಿ ಆ ಚಿತ್ರದ ಪ್ರಸಾರ ನಿಷೇಧವನ್ನು ಅವರು ಪ್ರಶ್ನಿಸಿದ್ದಾರೆ.

2012ರ ದೆಹಲಿ ಗ್ಯಾಂಗ್ ರೇಪ್ ಆಧರಿಸಿದ ಸಾಕ್ಷ್ಯಚಿತ್ರ ''ಇಂಡಿಯಾಸ್ ಡಾಟರ್" ಸಮಾಜಕ್ಕೆ ಮತ್ತು ಅದರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದ್ದು, ಪ್ರತಿಯೊಬ್ಬರೂ ಆ ಚಿತ್ರವನ್ನು ವೀಕ್ಷಿಸಬೇಕು ಎಂದು ಹೇಳಿದ್ದಾರೆ.ಜೈಲಿನಲ್ಲಿ ಅಪರಾಧಿ ಆ ರೀತಿ ಹೇಳುವುದು ಸಾಧ್ಯವಿದ್ದರೆ, ಅವನು ಮುಕ್ತವಾಗಿ ಓಡಾಡಿಕೊಂಡಿರಬೇಕಾದರೆ ಏನನ್ನು ಹೇಳಬಹುದೆಂದು ಊಹಿಸುತ್ತೀರಾ ಎಂದು 6 ಮಂದಿ ಕಾಮುಕರಿಂದ ನಿರ್ದಯ ಗ್ಯಾಂಗ್ ರೇಪ್‌ ಮತ್ತು ಹತ್ಯೆಗೆ ಒಳಗಾದ ನಿರ್ಭಯಾಳ ತಂದೆ ಹೇಳಿದರು.

ಈ ಸಾಕ್ಷ್ಯಚಿತ್ರವು ಏನು ನಡೆಯುತ್ತಿದೆಯೆಂಬುದನ್ನು ಬಹಿರಂಗ ಮಾಡುತ್ತದೆ ಎಂದೂ ನುಡಿದರು. ಬ್ರಿಟಿಷ್ ಚಿತ್ರನಿರ್ಮಾಪಕರಾದ ಲೆಸ್ಲೀ ಉಡ್ವಿನ್ ಸಾಕ್ಷ್ಯಚಿತ್ರದಲ್ಲಿ ನಿರ್ಭಯಾ ತಂದೆ, ತಾಯಿಗಳು, ವೈದ್ಯರು, ಪೊಲೀಸರು, ವಕೀಲರು ಮತ್ತು ರೇಪಿಸ್ಟ್ ಒಬ್ಬನ ಸಂದರ್ಶನಗಳು ಸೇರಿದ್ದು ಬಿಬಿಸಿ ಬುಧವಾರ ರಾತ್ರಿ ಅದನ್ನು ಪ್ರಸಾರ ಮಾಡಿತ್ತು. ಮರಣದಂಡನೆಗೆ ಗುರಿಯಾದ ಮುಕೇಶ್ ಸಿಂಗ್ ಜೈಲಿನಿಂದ ಸಂದರ್ಶನ ನೀಡಿ ನಿರ್ಭಯಾಳೇ ಹತ್ಯೆಗೆ ಕಾರಣವೆಂದು ತನ್ನ ದುಷ್ಕೃತ್ಯಕ್ಕೆ ಸ್ವಲ್ಪವೂ ಪಶ್ಚಾತ್ತಾಪವಿಲ್ಲದೇ ಹೇಳಿದ್ದ. 

ವೆಬ್ದುನಿಯಾವನ್ನು ಓದಿ