ನೂರಾರು ಪ್ರಾಣ ಉಳಿಸಿದ ಶ್ವಾನ ಪ್ರಿನ್ಸ್‌ಗೆ ಸರ್ಕಾರಿ ಗೌರವದ ಅಂತ್ಯಕ್ರಿಯೆ

ಶುಕ್ರವಾರ, 21 ನವೆಂಬರ್ 2014 (20:15 IST)
ಮುಂಬೈ ಪೊಲೀಸ್ ಪಡೆಯಲ್ಲಿ ಅಪಾರ ಸೇವೆ ಸಲ್ಲಿಸಿದ ಪ್ರಿನ್ಸ್ ಇದೇ ಆಗಸ್ಟ್‌ನಲ್ಲಿ ನಿವೃತ್ತಿಯಾಗಿ ವಿಶ್ರಾಂತ ಜೀವನ ಸಾಗಿಸಿತ್ತು. ಆದರೆ ನಿವೃತ್ತ ಜೀವನವನ್ನು ಸಂತೋಷದಿಂದ ಕಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಶುಕ್ರವಾರ ಬೆಳಿಗ್ಗೆ ಹೃದಯಾಘಾತವಾಗಿ ವೀರಮರಣವನ್ನು ಅಪ್ಪಿತು.

ಅದು ಮರಣವಪ್ಪಿದರೂ ಮುಂಬೈ ಪೊಲೀಸ್ ಪಡೆಯಲ್ಲಿ ತನ್ನ ಚಿರನೆನಪನ್ನು ಉಳಿಸಿಹೋಯಿತು. ಪ್ರಿನ್ಸ್ ಲ್ಯಾಬ್ರಡಾರ್ ನಾಯಿಯಾಗಿದ್ದು, ಮುಂಬೈ ಪೊಲೀಸ್ ಬಾಂಬ್ ಪತ್ತೆಹಚ್ಚುವ ತಂಡದಲ್ಲಿತ್ತು. ಕೇಂದ್ರ ಮುಂಬೈನ ಪರೇಲ್‌ನ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಮೃತಪಟ್ಟಿತು.

ಮುಂಬೈ ಪೊಲೀಸರು ಅದಕ್ಕೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸಿ 21 ಕುಶಾಲ ತೋಪುಗಳನ್ನು ಹಾರಿಸಿ ಅದರ ಸೇವೆಯನ್ನು ಸ್ಮರಿಸಿದರು.26/11 ಭಯೋತ್ಪಾದನೆ ದಾಳಿಯಲ್ಲಿ ಪ್ರಿನ್ಸ್ ನಾಲ್ಕು ಜೀವಂತ ಬಾಂಬ್‌ಗಳನ್ನು ಮತ್ತು 17 ಹ್ಯಾಂಡ್ ಗ್ರೆನೇಡ್‌ಗಳ ಸುಳಿವನ್ನು ಪತ್ತೆಹಚ್ಚುವ ಮೂಲಕ ನೂರಾರು ಜನರ ಜೀವವನ್ನು ಉಳಿಸಿತ್ತು

ವೆಬ್ದುನಿಯಾವನ್ನು ಓದಿ