ಥರ್ಡ್‌ರೇಟ್ ರಾಜಕಾರಣಿಯಂತೆ ವರ್ತಿಸಬೇಡಿ: ಮಮತಾ ಬ್ಯಾನರ್ಜಿಗೆ ಸಿಪಿಐ ಸಲಹೆ

ಬುಧವಾರ, 22 ಜುಲೈ 2015 (15:41 IST)
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಹುದ್ದೆಗೆ ತಕ್ಕಂತೆ ಘನತೆ ಗೌರವದಿಂದ ವರ್ತಿಸುವುದು ಸೂಕ್ತ ಥರ್ಡ್ ರೇಟ್ ರಾಜಕಾರಣಿಯಂತೆ ವರ್ತಿಸುವುದು ಸರಿಯಲ್ಲ ಎಂದು ಸಿಪಿಐ(ಎಂ) ನಾಯಕ ಡಿ.ರಾಜಾ ಹೇಳಿದ್ದಾರೆ.
 
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯಾವುದೇ ಹೇಳಿಕೆ ನೀಡಲಿ ಅದರಲ್ಲಿ ಸಭ್ಯತೆಯಿರಬೇಕು. ತಮ್ಮ ಪದವಿಗೆ ಗೌರವ ತರಬೇಕು. ಥರ್ಡ್‌ರೇಟ್ ಪಕ್ಷದ ರಾಜಕಾರಣಿಯಂತೆ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಮಮತಾ ಅವರಿಗೆ ನನ್ನ ಹೇಳಿಕೆ ಅರ್ಥವಾಗುತ್ತದೆ ಎಂದು ನಾನು ಭಾವಿಸಿದ್ದೇನೆ ಎಂದು ಸಲಹೆ ನೀಡಿದ್ದಾರೆ. 
 
ಕಳೆದ ಮೂರು ದಶಕಗಳಿಗಿಂತ ಹೆಚ್ಚು ಎಡಪಕ್ಷ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸಿದೆ. ಆದ್ದರಿಂದ ರಾಜ್ಯದ ಜನತೆಯನ್ನು ದಾನವಾಗಿ ಬಂದವರು ಎಂದು ತಿಳಿಯಬಾರದು ಎಂದು ತಿರುಗೇಟು ನೀಡಿದ್ದಾರೆ.
 
ಪ್ರಜಾಪ್ರಭುತ್ವದಲ್ಲಿ ಅಧಿಕಾರ ನೀಡಿದ ಜನರೇ ಮುಂದೊಂದು ದಿನ ಅದೇ ಜನ ನಿಮ್ಮ ವಿರುದ್ಧ ತಿರುಗಿ ಬೀಳುತ್ತಾರೆ. ಆದ್ದರಿಂದ ಜನತೆಯನ್ನು ಸುಲಭವಾಗಿ ತೆಗೆದುಕೊಳ್ಳಬಾರದು.ಮಮತಾರಿಗೆ ಅರ್ಥವಾಗುತ್ತದೆ ಎಂದು ತಿಳಿದಿರುವುದಾಗಿ ಹೇಳಿದ್ದಾರೆ.  
 
ಪಶ್ಚಿಮ ಬಂಗಾಳದ ಜನತೆಯ ಬೆಂಬಲ ಹೇಗೆ ಪಡೆಯಬೇಕು. ಅವರ ಆತ್ಮವಿಶ್ವಾಸವನ್ನು ಮತ್ತೆ ಹೇಗೆ ಒಲಿಸಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ. ಪಶ್ಚಿಮ ಬಂಗಾಳದ ಜನತೆ ಈಗಾಗಲೇ ಎಡಪಕ್ಷಗಳತ್ತ ಒಲವು ತೋರುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜನತೆ ಎಡಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
 

ವೆಬ್ದುನಿಯಾವನ್ನು ಓದಿ