ಸರ್ಕಾರ ಭೃಷ್ಟಾಚಾರ ನಿಗ್ರಹಿಸಲು ವಿಫಲವಾದರೆ ತೆರಿಗೆ ಕಟ್ಟಬೇಡಿ: ಸುಪ್ರೀಂಕೋರ್ಟ್

ಬುಧವಾರ, 3 ಫೆಬ್ರವರಿ 2016 (15:17 IST)
ಭೃಷ್ಟಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಅತೀವ ಖೇದ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ, ಸರ್ಕಾರ ಇದನ್ನು ನಿಗ್ರಹಿಸಲು ವಿಫಲವಾದರೆ ತೆರಿಗೆ ಕಟ್ಟಬೇಡಿ, ಅಸಹಕಾರ ಚಳುವಳಿಯನ್ನು ಪ್ರಾರಂಭಿಸಿ ಎಂದು ನಾಗರಿಕರಿಗೆ ಕರ ನೀಡಿದೆ. 


 
ಪರಿಶಿಷ್ಟ ಜಾತಿಯಡಿ ಬರುವ ಮಾತಂಗ ಸಮುದಾಯದವರಿಗಾಗಿ ಕೆಲಸ ಮಾಡುವ ಲೋಕ್ಶಹಿರ್ ಅಣ್ಣಭೌ ಸಾಥೆ ವಿಕಾಸ ಮಹಾಮಂಡಲದಲ್ಲಿ  385 ಕೋಟಿ ರೂಪಾಯಿ ದುರುಪಯೋಗವಾಗಿರುವುದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ನ್ಯಾಯಮೂರ್ತಿ ಅರುಣ್ ಚೌಧರಿ ಈ ಅಭಿಪ್ರಾಯ ಪಟ್ಟಿದ್ದಾರೆ.
 
ತೆರಿಗೆದಾರರಿಗೆ ಆಳವಾದ ದುಃಖ ಇದೆ. ಈ ಕಡುಯಾತನೆಯ ನೋವನ್ನು ಸರ್ಕಾರಕ್ಕೂ ಅರ್ಥ ಮಾಡಿಸೋಣ. ಲಂಚಗುಳಿತವನ್ನು ನಿರ್ಮೂಲನೆಗೊಳಿಸಿ ತೆರಿಗೆದಾರರಿಗೆ ಹತಾಶೆಯಾಗದಂತೆ ತಡೆಯುವುದು ಸರ್ಕಾರದ ಗುರುತರ ಜವಾಬ್ದಾರಿ.  ಭೃಷ್ಟಾಚಾರ ಬಹುತಲೆಯ ರಾಕ್ಷಸನಂತೆ. ನಾಗರಿಕರು ಒಟ್ಟಾಗಿ ಸೇರಿ ಇದರ ವಿರುದ್ಧ ಹೋರಾಡಬೇಕಿದೆ. ನಾವೆಲ್ಲರೂ ಸೇರಿ ಕೆಲಸ ಮಾಡಿದರೆ ಈ ಅಪವಿತ್ರ ವಾತಾವರಣವನ್ನು ಸೋಲಿಸಬಹುದು. ಒಂದು ವೇಳೆ ಇದು ಮುಂದುವರೆದರೆ ಅಸಹಕಾರ ಚಳುವಳಿ ಮೂಲಕ ತೆರಿಗೆದಾರರು ತೆರಿಗೆ ಕಟ್ಟುವುದನ್ನು ನಿಲ್ಲಿಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಕೋರ್ಟ್ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ