ಮೋದಿ ಅಲೆಯನ್ನಷ್ಟೇ ನೆಚ್ಚಿ ಕೂರಬೇಡಿ : ಬಿಜೆಪಿ ಕಾರ್ಯಕರ್ತರಿಗೆ ಗಡ್ಕರಿ ಕಿವಿಮಾತು

ಮಂಗಳವಾರ, 19 ಆಗಸ್ಟ್ 2014 (17:03 IST)
ಸ್ವಯಂ ಸಂತೋಷದಲ್ಲಿ ಮೈಮರೆಯಬೇಡಿ ಎಂದು ಬಿಜೆಪಿ ಕಾರ್ಯಕರ್ತರನ್ನು ಎಚ್ಚರಿಸಿರುವ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ "ಮೋದಿ ಅಲೆ" ಯನ್ನೇ ಅವಲಂಬಿಸಿರಬೇಡಿ ಎಂದು ಹೇಳಿದ್ದಾರೆ. 

ದೇಶದಲ್ಲಿ ಮೋದಿ ಅಲೆ ಇರುವುದು ಸತ್ಯ ಎಂದು ಒತ್ತಿ ಹೇಳಿದರೂ ಕೆಳಸ್ತರದ ಜನರನ್ನು ತಲುಪಿ ಅವರ ವಿಶ್ವಾಸವನ್ನು ಗಳಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ  ಕಿವಿಮಾತು ಹೇಳಿದರು. 
 
''ಮೋದಿ ಅಲೆಯ ಮತ್ತು ಅವರ ನಾಯಕತ್ವದ ಬಗ್ಗೆ ವಿಶ್ವಾಸದಿಂದಿರಿ. ಆದರೆ ಅದರ ಆಧಾರದ ಮೇಲೆಯೇ  ರಾಜ್ಯದಲ್ಲಿ  ಅಧಿಕಾರಕ್ಕೆ ಬರುವ  ಕನಸು ಕಾಣಬೇಡಿ .ಮತದಾರರ ಮನಗೆಲ್ಲಲು ತಳಮಟ್ಟದಲ್ಲಿ ಕೆಲಸ ಮಾಡಿ'' ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. 
 
ರಾಜಕೀಯ ಲಾಭಕ್ಕಾಗಿ ನಾಗ್‌ಪುರ್ ಮೆಟ್ರೋ ಯೋಜನೆಗೆ ಕೇಂದ್ರ ಸರಕಾರ ತರಾತುರಿಯಲ್ಲಿ ಅನುಮತಿ ನೀಡಿದೆ, ಆದರೆ ಪುಣೆ ಮೆಟ್ರೋ ಯೋಜನೆಯನ್ನು ಕಡೆಗಣಿಸಿದೆ ಎಂಬ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್‌ ಚೌಹಾಣ್ ಮತ್ತು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಆರೋಪಗಳನ್ನು ತಳ್ಳಿ ಹಾಕಿರುವ ಗಡ್ಕರಿ,  ಇತರ ನಗರಗಳ ಜತೆಗೆ ಪುಣೆ ಕೂಡ ಈ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
 
ಮುಖ್ಯಮಂತ್ರಿ ಚೌಹಾನ್, ಮೆಟ್ರೋ ಯೋಜನೆ ಜಾರಿಗೆ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಲಿಲ್ಲ. ರಾಜ್ಯ ಸರ್ಕಾರ ಮತ್ತು ಪುಣೆ ಪೌರಸಂಸ್ಥೆಗಳು ಕೂಡಾ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ವಿಧಿವಿಧಾನಗಳನ್ನು ಸೂಕ್ತ ಸಮಯದಲ್ಲಿಪೂರ್ಣಗೊಳಿಸಿಲ್ಲವಾದ್ದರಿಂದ ಯೋಜನೆಯ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದು ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ