ದೋಸೆಗೆ 6 ರೂ. ಮಟನ್ ಕರಿ ರೂ. 20: ಸಂಸದರಿಗೆ ಅಗ್ಗದ ದರದಲ್ಲಿ ತಿನಿಸು

ಮಂಗಳವಾರ, 23 ಜೂನ್ 2015 (20:26 IST)
ಬರೀ 6 ರೂ.ಗೆ ಬಿಸಿ, ಬಿಸಿ ದೋಸೆ, ಮಟನ್ ಕರಿ ಕೇವಲ 20 ರೂ. ಚಿಪ್ಸ್ ಜೊತೆ ಹುರಿದ ಮೀನು 25 ರೂ. ಕಟ್ಲೆಟ್ 18ರೂ. ಮಟನ್ ಕರಿ ಬೋನ್ ಜತೆ ರೂ. 20, ಮಸಾಲಾ ದೋಸೆ 6 ರೂ. ಇಷ್ಟೊಂದು ಕಡಿಮೆ ದರಕ್ಕೆ ತಿಂಡಿಗಳನ್ನು, ಖಾದ್ಯಗಳನ್ನು ನೀಡುವ ಹೊಟೆಲ್ ಇದೆಯಾ ಎಂದು ಆಶ್ಚರ್ಯವಾಗಬಹುದು.

ಆದರೆ ಸಂಸತ್ ಸದಸ್ಯರಿಗೆ ಬಡಿಸುವ ಸಂಸತ್ ಕ್ಯಾಂಟೀನ್‌ಗಳಲ್ಲಿ ಇಷ್ಟೊಂದು ಕಡಿಮೆ ದರಕ್ಕೆ ಆಹಾರ ಲಭ್ಯ. ಕಳೆದ ಐದು ವರ್ಷದಲ್ಲಿ ಈ ಕ್ಯಾಂಟೀನ್‌ಗಳು 60.7 ಕೋಟಿ ಸಬ್ಸಿಡಿಯನ್ನು ಪಡೆದಿವೆ ಎಂದು ಆರ್‌ಟಿಐ ಉತ್ತರವೊಂದರಲ್ಲಿ ತಿಳಿಸಲಾಗಿದೆ. 
 
 ಮಾಹಿತಿ ಹಕ್ಕು ಕಾಯ್ದೆಯನ್ವಯ ಸ್ವೀಕರಿಸಿದ ಈ ಐಟಂ ಪಟ್ಟಿಯಲ್ಲಿ ಸಂಸತ್ ಸದಸ್ಯರು ವರ್ಷಕ್ಕೆ 1.4 ಲಕ್ಷ ರೂ.ಗಿಂತ ಹೆಚ್ಚು ಭತ್ಯೆಗಳನ್ನು ಪಡೆದರೂ ಇಷ್ಟೊಂದು ಕಡಿಮೆ ದರಕ್ಕೆ ಪುಷ್ಕಳ ಆಹಾರವೂ ಸಿಗುತ್ತದೆ. 
 
ಮಾಂಸಾಹಾರಿ ಊಟಕ್ಕೆ ಕಚ್ಚಾ ಪದಾರ್ಥಗಳ ದರವು 99.05 ರೂ.ಗಳಾಗಿದ್ದರೆ ಸಿದ್ದಪಡಿಸಿದ ಊಟದ ದರವು ಸಂಸದರಿಗೆ ಕೇವಲ 33 ರೂ. ಆಗಿದ್ದು ಶೇ. 66 ಸಬ್ಸಿಡಿ ನೀಡಲಾಗಿದೆ ಎಂದು ಆರ್‌ಟಿಐ ಕಾರ್ಯಕರ್ತ ಸುಭಾಶ್ ಅಗರ್ವಾಲ್ ಅವರಿಗೆ ಉತ್ತರ ಸಿಕ್ಕಿದೆ. 
 
ಆರ್‌ಟಿಐ ಪ್ರತಿಕ್ರಿಯೆಯಲ್ಲಿ ಕ್ಯಾಂಟೀನ್‌ಗಳು 76 ಬಾಯಲ್ಲಿ ನಿರೂರಿಸುವ ತಿನಿಸುಗಳನ್ನು ಸರಳವಾದ ಬೇಯಿಸಿದ ಮೊಟ್ಟೆಯಿಂದ ಹಿಡಿದು ವಿವಿಧ ಮಟನ್ ಮತ್ತು ಚಿಕನ್ ತಿನಿಸುಗಳೊಂದಿಗೆ ಶೇ. 90ರಿಂದ ಶೇ. 63 ಸಬ್ಸಿಡಿ ದರದಲ್ಲಿ ಬಡಿಸುತ್ತಿದೆ. 
 

ವೆಬ್ದುನಿಯಾವನ್ನು ಓದಿ