ಕುಡಿದು ಮತ್ತಿನಲ್ಲಿರುವ ಚಾಲಕ ಆತ್ಮಾಹುತಿ ಬಾಂಬರ್‌ನಂತೆ: ಕೋರ್ಟ್

ಮಂಗಳವಾರ, 31 ಮಾರ್ಚ್ 2015 (20:00 IST)
ಮದ್ಯ ಸೇವನೆಯ ಮತ್ತಿನಲ್ಲಿರುವ ಚಾಲಕ ತಾನು ಸಾಯಿವುದಲ್ಲದೇ ರಸ್ತೆಯಲ್ಲಿ ಸಾಗುತ್ತಿರುವವರನ್ನು ಹತ್ಯೆಗೈಯುವ ಆತ್ಮಾಹುತಿ ಬಾಂಬರ್‌ನಂತೆ. ಇಂತಹ ಚಾಲಕರಿಗೆ ಕಠಿಣ ಶಿಕ್ಷೆ ವಿಧಿಸುವುದು ಅಗತ್ಯವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.  

ಕುಡಿದ ಮತ್ತಿನಲ್ಲಿದ್ದ ಅಟೋ ಚಾಲಕನೊಬ್ಬ ಎಸಗಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ನೀಡುವ ಸಂದರ್ಭದಲ್ಲಿ ಈ ರೀತಿ ಹೇಳಿಕೆ ನೀಡಿದೆ.

ಕುಡಿದು ವಾಹನ ಚಾಲನೆ ಮಾಡುವ ವ್ಯಕ್ತಿಗಳಿಗೆ ಅತಿ ಕಠಿಣ ಶಿಕ್ಷೆಯನ್ನು ವಿಧಿಸಬೇಕು. ಶಿಕ್ಷೆಗೆ ಹೆದರಿಯಾದರೂ ವಾಹನ ಚಾಲಕರು ಕುಡಿದು ವಾಹನ ಚಲಾಯಿಸಬಾರದು. ಮದ್ಯದ ವೈಯಸನಿಯಾಗಿರುವ ಚಾಲಕ ತಾನು ಇಹಲೋಕ ತ್ಯಜಿಸುವುದಲ್ಲದೇ ರಸ್ತೆಯಲ್ಲಿ ತಿರುಗಾಡುತ್ತಿರುವವರನ್ನು ಕೂಡಾ ಪರಲೋಕಕ್ಕೆ ಕಳುಹಿಸುತ್ತಾನೆ ಎಂದು ಹೆಚ್ಚುವರಿ ನ್ಯಾಯಾಧೀಶ ವಿರೇಂದರ್ ಭಟ್ ಗುಡುಗಿದ್ದಾರೆ.

ವಿಚಾರಣೆ ನ್ಯಾಯಾಲಯ ತನಗೆ ನೀಡಿದ 20 ದಿನಗಳ ಶಿಕ್ಷೆಯನ್ನು ಕಡಿತಗೊಳಿಸಬೇಕು ಎಂದು ಅಟೋ ರಿಕ್ಷಾ ಚಾಲಕ ಕೋರ್ಟ್‌ಗೆ ಮಾಡಿದ ಮನವಿಯನ್ನು ನ್ಯಾಯಮೂರ್ತಿಗಳು ತಿರಸ್ಕರಿಸಿದ್ದಾರೆ.

ಮಿತಿ ಮೀರಿದ ಮದ್ಯ ಸೇವನೆಯಿಂದಾಗಿ ವಾಹನ ಚಾಲಕರು ವಾಹನದ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದರಿಂದ ಅಪಘಾತಗಳು ಸಂಭವಿಸುತ್ತವೆ. ಅನಿವಾರ್ಯ ಸಂದರ್ಭಗಳಲ್ಲಿ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ್ಳುವಲ್ಲಿ ಚಾಲಕ ವಿಫಲನಾಗುತ್ತಾನೆ ಎಂದು ಹೆಚ್ಚುವರಿ ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ